27.1.17


 ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಙ ಕಾರ್ಯಕ್ರಮ




















.
ಪೆರ್ಮುದೆಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಙ ಕಾರ್ಯಕ್ರಮವು ನಡೆಯಿತು.ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಮೊಹಮ್ಮದ್ ಅಲಿ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ ,ಶಾಲಾ ಪ್ರಬಂಧಕರು ಶ್ರೀ ರವಿಶಂಕರ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಖಾದರ್ ಮಾಸ್ಟರ್, ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಙದ ಶಾಲಾ ಮಟ್ಟದ ಸಮಿತಿಗೆ ರೂಪುನೀಡಲಾಯಿತು.

            ಮಂಜೇಶ್ವರ ಶಾಸಕರಾದ ಶ್ರೀ ಪಿ.ಬಿ.ಅಬ್ದುಲ್ ರಝಾಕ್ ಪ್ರಧಾನ ರಕ್ಷಾಧಿಕಾರಿಯಾಗಿಯೂ, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶ್ರೀಮತಿ ಭಾರತಿ.ಜೆ.ಶೆಟ್ಟಿ ರಕ್ಷಾಧಿಕಾರಿಯಾಗಿರುವ  ಸಮಿತಿಗೆ  ಪೈವಶಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿಸ್ಥಾಯಿ ಸಮಿತಿ ಚೆಯರ್ ಮಾನ್  ಶ್ರೀ ಎಂ.ಕೆ ಅಮೀರ್ ಚೆಯರ್ ಮಾನ್  ಆಗಿಯೂ, ಶಾಲಾ ಪ್ರಬಂಧಕರಾದ ಶ್ರೀ ರವಿಶಂಕರ ಭಟ್ ಪ್ರಧಾನ ಸಂಚಾಲಕರಾಗಿಯೂ , ಉಪ ಸಂಚಾಲಕರಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಮೊಹಮ್ಮದ್ ಅಲಿ ,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ಕನ್ವೀನರ್ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ, ಜೊತೆ ಕನ್ವೀನರ್ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್,ಎಂಬಿವರನ್ನು ಆಯ್ಕೆಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ,ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕುಟುಂಬಶ್ರೀ, ಪಿ.ಟಿ.ಎ, ಸದಸ್ಯರನ್ನೂಳಗೊಂಡ ಸಮಿತಿಗೆ ರೂಪುನೀಡಲಾಯಿತು.ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಪ್ರತಿಜ್ಙೆಯನ್ನು ಕೈಗೊಳ್ಳಲಾಯಿತು. ಸದಾಶಿವ ಮಾಸ್ಟರ್ ಪೊಯ್ಯೆ ಸ್ವಾಗತಿಸಿ  ಜಯಪ್ರಸಾದ್ ವಂದಿಸಿದರು



ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ.

ಪೆರ್ಮುದೆ : ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವದ ಕುರಿತು ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಮೊಹಮ್ಮದ್ ಅಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ ಎಂಬಿವರು ಉಪಸ್ಥಿತರಿದ್ದರು.ವಿಧ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. 










25.1.17


PTA Meeting....heald on 24-01-2017
ಅಜೆಂಡಾ 
ಶಾಲಾ ವಾರ್ಷಿಕೋತ್ಸವ
Mid Term Evaluation...






Manjeshwar AEO  Sri N. Nandikeshan Visited our school on 24-01-2017



16.1.17


ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರೂಪೀಕರಣ

 ಪೆರ್ಮುದೆ  : ದಿನಾಂಕ 15 -01- 2017 ನೇ ಆದಿತ್ಯವಾರದಂದು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಗಮ ಹಾಗೂ ಹಳೆ ವಿದ್ಯಾರ್ಥಿ ಸಂಘ ರೂಪೀಕರಣ ಸಭೆ ಜರಗಿತು. ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್ ಅಧ್ಯಕ್ಷತೆಯನ್ನು ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ , ಪಿ.ಟಿ.ಎ ಅಧ್ಯಕ್ಷ ಶ್ರೀ ಮೊಹಮ್ಮದ್ ಅಲಿ , ನಿವೃತ್ತ  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಲಿತ.ಎ, ಹಿರಿಯ ಹಳೆವಿದ್ಯಾರ್ಥಿ ಶ್ರೀ ಹರಿಹರ ಭಟ್  ಕುಂಬಳೆ ಉಪಸ್ಥಿತರಿದ್ದರು.
      ಹಳೆ ವಿದ್ಯಾರ್ಥಿಗಳಾದ  ಎಂ.ಎನ್. ಪ್ರಸಾದ್,  ರಝಿನ .ಪಿ, ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು.ಬಳಿಕ ಹಳೆ ವಿದ್ಯಾರ್ಥಿ ಸಂಘ ರೂಪೀಕರಿಸಲಾಯಿತು. ಸಂಘದ ಸಂಚಾಲಕರಾಗಿ  ಶಾಲಾ ವ್ಯವಸ್ಥಾಪಕರು  ಶ್ರೀ  ರವಿಶಂಕರ ಭಟ್ , ಕನ್ವೀನರ್ ಆಗಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ ಇವರನ್ನು ನೇಮಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಶ್ರೀ ಹರಿಹರ ಭಟ್ ಕುಂಬಳೆ ಇವರನ್ನು ಆಯ್ಕೆಮಾಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪೀಟರ್ ರೋಡ್ರಿಗ್ರಸ್ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತ.ಎ, ಎಂಬಿವರನ್ನು ಆಯ್ಕೆಮಾಡಲಾಯಿತು.
          
  ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಮುಸ್ತಫ ಪೆರ್ಮುದೆ

 ಇವರನ್ನು ಚುನಾಯಿಸಲಾಯಿತು.  ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಹರೀಶ್, 

ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀ ಹರಿನಾಥ ಎಂಬಿವರನ್ನು  

ಆಯ್ಕೆಮಾಡಲಾಯಿತು.12 ಸದಸ್ಯರನ್ನು ಒಳಗೊಂಡ ಸಮಿತಿಯನ್ನು 

ರಚಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ 

ಸ್ವಾಗತಿಸಿದರು, ಅಧ್ಯಾಪಕರಾದ ಸದಾಶಿವ.ಕೆ.ಕೆ ಕಾರ್ಯಕ್ರಮ ನಿರೂಪಿಸಿದರು. 

ಅಧ್ಯಾಪಿಕೆ ಡೆಫ್ನಿ ಸ್ಮಿತಾ ವಂದಿಸಿದರು.










13.1.17

11.1.17