WELCOME 2 OUR SCHOOL BLOG

WELCOME 2 OUR SCHOOL BLOG
WELCOME 2 OUR SCHOOL BLOG

BREAKING NEWS

WEL COME TO B.P.P.A.L.P.S PERMUDE SCHOOL BLOG

Eye Test

Eye Test

ABOUT US


ಬಾಡೂರು ಪೆರ್ಮುದೆ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ

1895ನೇ ಇಸವಿಯಲ್ಲಿ ಮದರಾಸು ಸರಕಾರದಿಂದ ಮಾನ್ಯತೆ ಪಡೆದ ನಮ್ಮ ಶಾಲೆಯು ಬಾಡೂರು ಪ್ರಾಥಮಿಕ ಶಾಲೆ ಎ೦ಬ ಹೆಸರಿನಲ್ಲಿ ಬಾಡೂರು ಗ್ರಾಮದ ಕಟ್ಟದಕಾಡು ಎ೦ಬಲ್ಲಿ ಸ್ಥಾಪನೆಗೊಂಡಿತು. ಕಳೆದ 119 ವರ್ಷಗಳಿಂದ ಈ ಪ್ರದೇಶದ ವಿದ್ಯಾಭ್ಯಾಸ ಹಾಗು ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ತನ್ನ 120ನೇ ವರ್ಷಕ್ಕೆ ಕಾಲಿರಿಸುತ್ತಿದೆ.
ಈ ಶಾಲೆಯು ಪ್ರಕ್ರತಿ ರಮಣೀಯವಾದ ಪೆರ್ಮುದೆಗೆ ವರ್ಗಾಯಿಸಲ್ಪಟ್ಟಿತು. ಪ್ರಾಥಮಿಕ ಹಂತದಲ್ಲಿ ಮೊದಲು ಇಲ್ಲಿ 1 ರಿಂದ 5 ರ ತರಗತಿಗಳಿಗೆ ಸರಕಾರದಿಂದ ಮಾನ್ಯತೆಲಭಿಸಿದ್ದರೂ ಪ್ರಸ್ತುತ 1 ರಿಂದ 4ರ ವರೆಗೆ ತರಗತಿಗಳು ನಡೆಯುತ್ತಿದೆ. ಮೊದಲು ಶನ್ನಿಕೋಡಿ ಮನೆತನದವರು ಈ ಶಾಲೆಯ ಪ್ರಭಂಧಕರಾಗಿದ್ದರು. ಪ್ರಸ್ತುತ ಎಡಕ್ಕಾನ ರವಿಶಂಕರ ಭಟ್ ರವರ ಪ್ರಬಂಧಕತ್ವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಅತ್ಯುತ್ತಮ ಎಲ್.ಪಿ ಶಾಲೆಗಳಲ್ಲಿ ಒಂದಾಗಿ ದಿಟ್ಟಹೆಜ್ಜೆಯಿಡುತ್ತಿದೆ.
ನಮ್ಮ ಶಾಲೆಗೆ ಸಮೀಪದ ಎಡಕ್ಕಾನ,ಪೆರಿಯಡ್ಕ,ಕುಂಡೇರಿ,ನೆಕ್ಕರೆಕಾಡು,ಕಂಬಾರು, ಮೊದಲಾದ ಸ್ಥಳಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ.ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೂ ಪಿ.ಟಿ.ಎ, ಯಂ.ಪಿ.ಟಿ.ಎ, ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಸಹಕಾರಗಳು ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಅತ್ಯುತ್ತಮ ಸಮವಸ್ತ್ರ, ಕಾರ್ಯಕ್ಷಮವಾದ ಮಧ್ಯಾಹ್ನದ ಭೋಜನ ವ್ಯವಸ್ಥೆ, ಗುಣಮಟ್ಟದ ವಿದ್ಯಾಭ್ಯಾಸ, ಶೈಕ್ಷಣಿಕ ವರ್ಷಗಳಲ್ಲಿ ನಡೆಯುವ ವಿವಿಧ ಮೇಳಗಳಲ್ಲಿ, ಆ ಟೋಟಗಳಲ್ಲಿ, ಕಲೋತ್ಸವಗಳಲ್ಲಿ ಉತ್ತಮ ಸಾಧನೆ,ಶಾಲಾ ವಾರ್ಷಿಕೋತ್ಸವ, ತರಬೇತಿ ಶಿಬಿರಗಳು, ಆರೋಗ್ಯತರಗತಿಗಳು,ಎ೦ಬಿವುಗಳು ಶಾಲೆಯ ಶೈಕ್ಷಣಿಕ ಅಭಿವೃಧಿಯ ಸಂಕೇತಗಳಾಗಿವೆ.

No comments:

Post a Comment