2.6.26

ಶಾಲಾ ಪ್ರವೇಶೋತ್ಸವ 2026

ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಪ್ರವೇಶೋತ್ಸವ ಬಿ.ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲಾ ಪ್ರವೇಶೋತ್ಸವವು ವಿವಿಧ ಮನೋರಂಜನ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು.ವರ್ಣರಂಜಿತ ಮೆರವಣಿಗೆಯೊಂದಿಗೆ ಪ್ರವೇಶೋತ್ಸವಕ್ಕೆ ಚಾಲನೆ ನೀಡಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಕೆ.ಎಚ್ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳೊಂದಿಗೆ ರಕ್ಷಕರೂ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಶ್ರದ್ಧೆ ವಹಿಸಬೇಕೆಂದರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ್ ಭಟ್ ಎಡಕ್ಕಾನ ,ಸಾಮಾಜಿಕ ಕಾರ್ಯಕರ್ತರಾದ ಶ್ರೀ ಶಿವಪ್ರಸಾದ್ ರೈ ಕುಡಾಲು, ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಸತೀಶ್ ಆಚಾರ್ಯ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಅಶೋಕ ಪೆರ್ಮುದೆ, ಎಂ ಪಿ ಟಿ ಅಧ್ಯಕ್ಷೆ ಶ್ರೀಮತಿ ಸುನಿತ, ಪ್ರೀ ಪ್ರೈಮರಿ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ , ನವಾಗತ ಮಕ್ಕಳಿಗೆ ಕಲಿಕೋಪಕರಣಗಳ ಕಿಟ್ ನೀಡಿ ಆದರದಿಂದ ಸ್ವಾಗತಿಸಿ ಶುಭ ಹಾರೈಸಿದರು.ಸನ್ಮಾನ್ಯ ವಿದ್ಯಾಭ್ಯಾಸ ಮಂತ್ರಿಯಾದ ಶ್ರೀ ಎನ್.ಶಂಸುದ್ದೀನ್ ಅವರ ಶಾಲಾ ಪ್ರವೇಶೋತ್ಸವದ ಸಂದೇಶವನ್ನು ಎಲ್ಲರಿಗೂ ಪ್ರದರ್ಶಿಸಲಾಯಿತು. ಈ ವರ್ಷ ಹತ್ತನೇ ತರಗತಿ ಹಾಗೂ ಪ್ಲಸ್ ಟು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ಶಾಲಾ ಪೂರ್ವ ವಿದ್ಯಾರ್ಥಿಗಳಾದ ಅಯನ,ಸ್ಕಂದ ಪ್ರಸಾದ್, ಶ್ರಾವ್ಯ, ಗ್ರೀಷ್ಮ, ಮರಿಯಮ್ಮತ್ ರಮೀಝಾ, ಪ್ರವೀಕ್ಷ, ಇವರನ್ನು ಸನ್ಮಾನಿಸಲಾಯಿತು.ಶಾಲಾ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿತು.ಶಾಲಾ ಅಧ್ಯಾಪಕರಾದ ಜಯಪ್ರಸಾದ ಕಾರ್ಯಕ್ರಮವನ್ನು ನಿರೂಪಿಸಿದರು. ಅಬ್ದುಲ್ ಮುನೀರ್ ವಂದಿಸಿದರು.

18.10.25

ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ ‌ಜ್ಯಾಮಿತೀಯ ಚಾರ್ಟ್ ತೃತೀಯ ಸ್ಥಾನ ಮಾನುಷಿ.ಕೆ
ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಭಿತ್ತಿ ಪತ್ರ ವಿನ್ಯಾಸ ಪ್ರಥಮ ಸ್ಥಾನ ನಿಧಿಶ್.ಎಂ

Achievements of BPPALPS PERMUDE

30.8.25

ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಣೆ

ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ತರಗತಿಗಳಲ್ಲಿ ಹೂ ರಂಗೋಲಿ, ಮಕ್ಕಳಿಗೆ ಹಾಗೂ ರಕ್ಷಕರಿಗೆ ವಿವಿಧ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮಗಳು ಜರಗಿದವು.ಮಧ್ಯಾಹ್ನ ಓಣಂ ಸಹಭೋಜನ ಏರ್ಪಡಿಸಲಾಯಿತು. ಬಳಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ , ಶಾಲಾ ರಕ್ಷಕ ಶಿಕ್ಷಕ ಅಧ್ಯಕ್ಷರಾದ ಶ್ರೀ ಅಶೋಕ.ಕೆ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಸುನಿತ, ರಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.