26.7.18









ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ
ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ತಿಳಿಸಲಾಯಿತು. ಮಾದಕ ವಸ್ತು ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು.

ವಾಚನಾವಾರಾಚರಣೆ










ವಾಚನಾವಾರಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.ಓದುವ ಚಟುವಟಿಕೆಗಳು, ಓದಿನ ಟಿಪ್ಪಣಿ ತಯಾರಿ, ಎಂಬೀ ಚಟುವಟಿಕೆಗಳನ್ನು ನಡೆಸಲಾಯಿತು

ವಿಶ್ವ ಯೋಗ ದಿನಾಚರಣೆ





ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಪರಿಚಯಿಸಲಾಯಿತು.


ವಿಶ್ವ ಪರಿಸರ ದಿನಾಟರಣೆ








ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ವಿವಿಧ ತರದ ಗಿಡಗಳನ್ನು ಪರಿಚಯಿಸಲಾಯಿತು.

ಶಾಲಾ ಪ್ರವೇಶೋತ್ಸವ


ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ವಿಜೃಂಭಣೆಯಿಂದ ಜರಗಿತು. ಪ್ರವೇಶೋತ್ಸವದ ಅಂಗವಾಗಿ ವರ್ಣರಂಜಿತ ಮೆರವಣಿಗೆ ಜರಗಿತು. ಬಳಿಕ ಸಭಾ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತ್  ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್ ರವರು ಉದ್ಘಾಟಿಸಿ ಶುಭ ಹಾರೈಸಿದರು. ನೂತನ ವಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ಕಿಟ್ ನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಶಾಲಾ ಶೈಕ್ಷಣಿಕ ವಿಚಾರಗಳನ್ನು ತಿಳಿಸಿ ಶುಭ ಹಾರೈಸಿದರು.ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷ ಜಯರಾಮ ಶೆಟ್ಟಿ ಬಂಡಾರಗುತ್ತು ಶುಭ ಹಾರೈಸಿದರು.ಸದಾಶಿವ ಮಾಸ್ಟರ್ ಪೊಯ್ಯೆ ಕಾರ್ಯಕ್ರಮವನ್ನು ನಿರೂಪಿಸಿದರು.ಅಬ್ದುಲ್ ಮುನೀರ್ ವಂದಿಸಿದರು