26.7.16


ಭಾರತೀಯ ಯೋಧರ ವೀರತೆ ಪ್ರತೀಕ ` ಕಾರ್ಗಿಲ್ 

ವಿಜಯೋತ್ಸವ


ಭಾರತದ ಸೇನಾ ಇತಿಹಾಸದಲ್ಲಿ ಅಭೂತಪೂರ್ವ ದಾಖಲೆಯನ್ನು ಬರೆದ ,

 ಭಾರತೀಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಕಾರ್ಗಿಲ್ ಸಮರ ನಡೆದು 

ಇದೀಗ ಹದಿನಾರು ವರ್ಷ ಸಂದಿದೆ . ಭಾರತ- ಪಾಕಿಸ್ತಾನ ನಡುವೆ 1999 ರಲ್ಲಿ 

ನಡೆದ ಈ ಯುದ್ಧ ಭಾರತದ ಸೇನಾ ಅಂಗಳದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

 ಗಡಿಯಲ್ಲಿ ಪದೇ ಪದೇ ಉಪಟಳ ನೀಡುತ್ತಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ನ ಕಡಿದಾದ 

ಪರ್ವತ ಕಣಿವೆಯಲ್ಲಿ ಭಾರತ ತಕ್ಕ ಉತ್ತರ ನೀಡಿತ್ತು . ಸತತ ಮೂರು ತಿಂಗಳ 

ಕಾಲ ನಡೆದ ಈ ಯುದ್ಧದಲ್ಲಿ 1999 ರ ಜುಲೈ 26 ರಂದು ವಿಜಯದ ಮಂದಹಾಸ 

ಬೀರುವುದರೊಂದಿಗೆ ಭಾರತ ಸೇನೆ ಜಯಶಾಲಿಯಾಗಿತ್ತು .

`
ಪರೇಷನ್ ವಿಜಯ್’ ಹೆಸರಿನಲ್ಲಿ ನಡೆದ ಈ ಕಾಯಾಚರಣೆಯಲ್ಲಿ ಭಾರತದ 

ಆರ್ಮಿ , ವಾಯುಸೇನೆ , ನೌಕಾಸೇನೆ ಪ್ರಬಲವಾಗಿ ಶತ್ರುಗಳ ಮೇಲೆ 

ಮುಗಿಬಿದ್ದಿದ್ದವು. ಆರ್ಮಿ ಕಾರ್ಗಿಲ್ ಗಡಿಯಲ್ಲಿ ಹೋರಾಡುತ್ತಿದ್ದರೆ, ನೌಕಾಸೇನೆ

 ಕರಾಚಿ ಗಡಿಯಲ್ಲಿ ನಿಂತು ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿತ್ತು. ಕಾರ್ಗಿಲ್ನ ಅತ್ಯಂತ

 ಕಡಿದಾದ ಪ್ರದೇಶದಲ್ಲಿ ಹೋರಾಡುವುದು ಸುಲಭದ ಮಾತಲ್ಲ . ಅದಾಗಲೇ 

ಪರ್ವತ ಶ್ರೇಣಿ ಏರಿ ಕುಳಿತಿದ್ದ ಶತ್ರುಗಳನ್ನು ಅಟ್ಟಿಸಿಕೊಂಡು ಹೋಗಿ

 ಸದೆಬಡಿಯುವುದು ಅತ್ಯಂತ ಕಠಿಣತಮ ಕೆಲಸವಾಗಿತ್ತು . ಅದಾಗ್ಯೂ ಸಹ 

ಛಲಬಿಡದ ತ್ರಿವಿಕ್ರಮನಂತೆ ಹೋರಾಡಿದ ಭಾರತೀಯ ಸೇನೆ ಕಾರ್ಗಿಲ್ನಲ್ಲಿ ವಿಜಯ

 ದಾಖಲಿಸಿತ್ತು. ಇದರ ನೆನಪಿಗಾಗಿ ಪ್ರತಿವರ್ಷ ಜುಲೈ 26 ನ್ನು ` ಕಾರ್ಗಿಲ್ ವಿಜಯ್

 ದಿವಸ್ ’ ಎಂದು ಆಚರಿಸಲಾಗುತ್ತದೆ .

ಆಪರೇಷನ್ ವಿಜಯ್’ ನಲ್ಲಿ ಭಾರತದ ಸುಮಾರು 547 ಸೈನಿಕರು 

ವೀರಮರಣವನ್ನಪ್ಪಿದ್ದು, ಸೌರಭ್ ಕಾಲಿಯ, ವಿಕ್ರಮ್ ಭಾತ್ರಾರಂತಹ ಯುವ 

ಸೇನಾಧಿಕಾರಿಗಳು ಹುತಾತ್ಮರಾಗಿದ್ದರು. ಅದೆಷ್ಟೋ ಸೈನಿಕರು 

ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಆದರೂ ದೇಶಕ್ಕಾಗಿ ಹೋರಾಡಿದ್ದೇವೆ

 ಎಂಬ ಹೆಮ್ಮೆ ಅವರಲ್ಲಿತ್ತು . ಅವರೆಲ್ಲರ ಈ ಅವಿರತ ಹೋರಾಟದ ಫಲವೇ ಇಂದು

 ನಾವು ನೆಮ್ಮದಿಯ ಸುರಕ್ಷಿತ ಜೀವನವನ್ನು ನಡೆಸುತ್ತಿದ್ದೇವೆ .

ಇಂದಿಗೂ ಗಡಿಯಲ್ಲಿ ಗುಂಡಿನ ಮೊರೆತ ಕೇಳುತ್ತಲೇ ಇದೆ . ಸೈನಿಕರು ತಮ್ಮ

 ಪ್ರಾಣತ್ಯಾಗ ಮಾಡುತ್ತಲೇ ಇದ್ದಾರೆ. ಅವರ ತ್ಯಾಗ- ಬಲಿದಾನಗಳಿಗೆ 

ಸಮವಾದದ್ದು ಯಾವುದೂ ಇಲ್ಲ. ಹವಾಮಾನ ವೈಪರೀತ್ಯಗಳನ್ನು , ಶತ್ರು

 ಉಪಟಳವನ್ನು ಲೆಕ್ಕಿಸದೇ , ಕುಟುಂಬದಿಂದ ದೂರ ಇದ್ದು , ದೇಶಕ್ಕಾಗಿ ನಿಸ್ವಾರ್ಥ

 ಸೇವೆ ಸಲ್ಲಿಸುತ್ತಿರುವ ಯೋಧರು ನಿಜಕ್ಕೂ ದೊಡ್ಡವರು . ` ದೇಶಸೇವೆಯೇ 

ಈಶಸೇವೆ’ ಎಂದು ರಕ್ಷಣಾ ಕಾರ್ಯ ಕೈಗೊಂಡಿರುವ ವೀರ ಸೇನಾನಿಗಳಿಗೆ ನಮ್ಮ 

ಕಡೆಯಿಂದೊಂದು ಬಿಗ್ ಸೆಲ್ಯೂಟ್........

No comments:

Post a Comment