13.2.17

ಪೆರ್ಮುದೆ ಶಾಲೆಯಲ್ಲಿ ಸಂಭ್ರಮದ  ಶಾಲಾ ವಾರ್ಷಿಕೋತ್ಸವ


ಪೆರ್ಮುದೆ : ದಿನಾಂಕ 11 ಫೆಬ್ರವರಿ ಶನಿವಾರದಂದು ಬಿ.ಪಿ.ಪಿ.ಎ.ಎಲ್.ಪಿ  ಪೆರ್ಮುದೆ ಶಾಲೆಯಲ್ಲಿ ವಿಜೃಂಭಣೆಯಿಂದ ಶಾಲಾ ವಾರ್ಷಿಕೋತ್ಸವ ಜರಗಿತು.ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ  ನ್. ನಂದಿಕೇಶನ್, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶ್ರೀಮತಿ ಭಾರತಿ ಜೆ ಶೆಟ್ಟಿ, ಅಭಿವೃದ್ಧಿ  ಸ್ಥಾಯಿ ಸಮಿತಿ ಪೈವಳಿಕೆ ಗ್ರಾಮ ಪಂಚಾಯತ್  ಅಧ್ಯಕ್ಷರಾದ ಶ್ರೀ  ಎಂ.ಕೆ. ಅಮೀರ್ , ಕೇರಳ ರಾಜ್ಯ ಕನ್ನಡ ಮಾಧ್ಯಮ  ಅಧ್ಯಾಪಕ ಸಂಘದ ಅಧ್ಯಕ್ಷರಾದ ಶ್ರೀ ಟಿ.ಡಿ. ಸದಾಶಿವ ರಾವ್ ,  ಶ್ರೀ  ಡಾ| ಪ್ರದೀಪ್ .ಇ.ಕೆ, ಶಾಲಾ ವ್ಯವಸ್ಥಾಪಕರಾದ ರವಿಶಂಕರ ಭಟ್ .ಇ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಭಾರತಿ, ಪ್ರೀ ಪೈಮರಿ  ಪಿ.ಟಿ.ಎ ಅಧ್ಯಕ್ಷ  ಶ್ರೀ  ಸತೀಶ್ ರೈ ಕುಡಾಲು ಗುತ್ತು , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ .ಎ  ವೇದಿಕೆಯಲ್ಲಿ ಉಪಸ್ಥಿತರಿದ್ದರು.
            ಶಾಲಾ ವಾರ್ಷಿಕೋತ್ಸವವನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶ್ರೀಮತಿ ಭಾರತಿ ಜೆ ಶೆಟ್ಟಿ ಉದ್ಘಾಟಿಸಿ ಶಾಲೆಯು ಅಭಿವೃದ್ಧಿ ಪಥದಲ್ಲಿ ಸಾಗುವುದು ಸಂತೋಷದ ವಿಚಾರ ಎಂದು ತಿಳಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ  ನ್. ನಂದಿಕೇಶನ್ ನವರು ಶಾಲಾ ಮಕ್ಕಳ ಉತ್ತಮ ಸಾದನೆಯನ್ನು  ಪ್ರಶಂಶಿಸುವುದರೊಂದಿಗೆ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು. ಶಾಲಾ ಹಳೆ ವಿದ್ಯಾರ್ಥಿ ಶ್ರೀ  ಡಾ| ಪ್ರದೀಪ್ .ಇ.ಕೆ ತನ್ನ ಶಾಲಾ ಅನುಭವಗಳನ್ನು ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೇರಳ ರಾಜ್ಯ ಕನ್ನಡ ಮಾಧ್ಯಮ  ಅಧ್ಯಾಪಕ ಸಂಘದ ಅಧ್ಯಕ್ಷರಾದ ಶ್ರೀ ಟಿ.ಡಿ. ಸದಾಶಿವ ರಾವ್ ಶಾಲಾ ಅಭಿವೃದ್ಧಿಯನ್ನು  ಪ್ರಶಂಶಿಸುತ್ತಾ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


            ಜಿಲ್ಲೆ , ಉಪಜಿಲ್ಲೆ ಗಳಲ್ಲಿ ವಿವಿಧ ಮೇಳಗಳಲ್ಲಿ , ಬಾಲ ಕಲೋತ್ಸವದಲ್ಲಿ 

ಮಿಂಚಿದ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. 

ಅಭಿವೃದ್ಧಿ  ಸ್ಥಾಯಿ ಸಮಿತಿ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಎಂ.ಕೆ. 

ಅಮೀರ್ ಅಧ್ಯಕ್ಷೀಯ ಭಾಷಣ ಮಾಡಿದರು.  ಶಾಲಾ ಮುಖ್ಯೋಪಾಧ್ಯಾಯಿನಿ

 ಶ್ರೀಮತಿ ಶಾರದ .ಎ   ಅತಿಥಿಗಳನ್ನು  ಸ್ವಾಗತಿಸಿದರು .  ಅಧ್ಯಾಪಕರಾದ ಸದಾಶಿವ

 .ಕೆ.ಕೆ ಕಾರ್ಯಕ್ರಮ ನಿರೂಪಣೆ ಮಾಡಿದರು, ಅಬ್ದುಲ್ ಮುನೀರ್ ವಂದಿಸಿದರು.

ಬಳಿಕ  ಶಾಲಾ ವಿದ್ಯಾರ್ಥಿಗಳಿಂದ  ಶಾಲಾ ಹಳೆ ವಿದ್ಯಾರ್ಥಿಗಳಿಂದ

 ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳು ಜರಗಿತು. ತುಳುವೆರೆ ತುಡರ್ 

ಕಲಾವಿದರು  ದೇಲಂಪಾಡಿಯವರು ನನ ದುಂಬುಗು ಎಂಬ ತುಳು ನಾಟಕವನ್ನು

 ಆಡಿ ತೋರಿಸಿದರು.












No comments:

Post a Comment