31.7.19


ಪೆರ್ಮುದೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಾಗೂ ಪೈವಳಿಕೆ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಜೃಂಭಣೆಯಿಂದ ಜರಗಿತು.ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಎ.ಕೆ.ಎಂ ಅಶ್ರಫ್ ,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆಅಮೀರ್ಮಂಜೇಶ್ವರ ಬಿ.ರ್.ಸಿಯ ಬಿ.ಪಿ.ಒ ಶ್ರೀ ವಿಜಯ ಕುಮಾರ್ ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಹಾಗೂ ಮಕ್ಕಳು,ರಕ್ಷಕರುಊರವರು ಸೇರಿ ವರ್ಣರಂಜಿತ ಮೆರವಣಿಗೆಯೊಂದಿಗೆ ಶಾಲಾ ಪ್ರವೇಶೋತ್ಸವಕ್ಕೆ ಚಾಲನೆ ನೀಡಲಾಯಿತುಗೊಂಬೆ ಮುಖವಾಡ ಧರಿಸಿದ ಮಕ್ಕಳುವರ್ಣರಂಜಿತ ಕೊಡೆಗಳನ್ನು ಹಿಡಿದ ರಕ್ಷಕರು ನೋಡುಗರ ಗಮನ ಸೆಳೆದರು.ಮೆರವಣಿೆಗೆಯ ಬಳಿಕ ಎಲ್ಲರಿಗೂ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ ಅವರ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಿಕೊಟ್ಟರು.ತದನಂತರ ಸಭಾಕಾರ್ಯಕ್ರಮವು ಆರಂಭಗೊಂಡಿತು.ಶಾಲಾ ನೃತ್ಯ ಗುಂಪು ಹೆಜ್ಜೆ ಗೆಜ್ಜೆ ಬಳಗದವರಿಂದ ಪ್ರಾರ್ಥನಾ ನೃತ್ಯದೊಂದಿಗೆ ಸಭಾ ಕಾರ್ಯಕ್ರಮಕ್ಕೆ ಶುಭಾರಂಭ ನೀಡಲಾಯಿತುಕಾರ್ಯಕ್ರಮದ ಅಧ್ಯಕ್ಷರಾದ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಎ.ಕೆ.ಎಂ ಅಶ್ರಫ್ ಮಂಜೇಶ್ವರ ಉಪಜಿಲ್ಲಾ ವಿಧ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆಅಮೀರ್ಮಂಜೇಶ್ವರ ಬಿ.ರ್.ಸಿಯ ಬಿ.ಪಿ.ಒ ಶ್ರೀ ವಿಜಯ ಕುಮಾರ್ ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಭಟ್.ಕೆಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲು ಗುತ್ತು ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ರಮಣಿ ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ಪ್ರವೇಶೋತ್ಸವದ ಕುರಿತು ಪ್ರಾಸ್ತಾವಿಕ 

ನುಡಿಗಳನ್ನು ಆಡಿದರು.ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಎ.ಕೆ.ಎಂ ಅಶ್ರಫ್ ದೀಪ ಬೆಳಗಿಸಿ 

ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಅವರು ಉದ್ಘಾಟನಾ ಭಾಷಣ ಮಾಡುತ್ತಾ ಮಕ್ಕಳಲ್ಲಿ 

ಉತ್ತಮ ಮೌಲ್ಯ,ಮನೋಭಾವಗಳನ್ನುಲಕ್ಷ್ಯ ಗುರಿ ತಲುಪಿಸುವುದರಲ್ಲಿ ಶಾಲೆಯ ಪಾತ್ರ ಅತಿದೊಡ್ಡದು 

ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮಂಜೇಶ್ವರ ಬಿ.ರ್.ಸಿಯ ಬಿ.ಪಿ.ಒ ಶ್ರೀ ವಿಜಯ 

ಕುಮಾರ್ ಅವರು ಕಾರ್ಯಕ್ರಮಕ್ಕೆ ಶುಭಹಾರೈಸುತ್ತಾ ರಕ್ಷಕರು ಮಕ್ಕಳಿಗಾಗಿ ಸ್ವಲ್ಪ ಸಮಯ 

ಮೀಸಲಿಡಬೇಕು ಎಂದು ತಿಳಿಸಿದರುಎಲ್.ಎಸ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಾಲಾ 

ವಿದ್ಯಾರ್ಥಿಗಳಾದ ಚೇತನ್ ಎಡಕ್ಕಾನ ಹಾಗೂ ನೂತನ್ ಎಡಕ್ಕಾನ ಅವರನ್ನು ಸ್ಮರಣಿಕೆ ನೀಡಿ 

ಗೌರವಿಸಲಾಯಿತುಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ 

ಎಂ.ಕೆಅಮೀರ್,ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಶಾಲಾ ನಿವೃತ್ತ 

ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಪಿ.ಟಿ.ಎ ಅಧ್ಯಕ್ಷ ರಾದ ಶ್ರೀ ಸತೀಶ್ ರೈ ಕುಡಾಲು 

ಗುತ್ತು ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಯಾದ ಶ್ರೀಮತಿ ರಮಣಿ ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ 

ಮೊಹಮ್ಮದಾಲಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಶಾಲೆಗೆ ಹೊಸದಾಗಿ ಆಗಮಿಸಿದ ನವಾಗತರಿಗೆ 

ಕಲಿಕೋಪಕರಣಗಳ ಕಿಟ್ ವಿತರಿಸಲಾಯಿತು.

ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ ಅಧ್ಯಕ್ಷೀಯ ಭಾಷಣ 

ಮಾಡಿದರುಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಾಲೆಗಳ ಪಾತ್ರ ಬಹು ದೊಡ್ಡದು ಎಂದು 

ತಿಳಿಸಿದರುಬಳಿಕ ಶಾಲಾ ನೃತ್ಯ ಗುಂಪು ಹೆಜ್ಜೆ ಗೆಜ್ಜೆ ಬಳಗದವರಿಂದ ಶಾಲಾ ಪ್ರವೇಶೋತ್ಸವ ಗಾನದ 

ನೃತ್ಯಾವಿಷ್ಕಾರ ನಡೆಯಿತುಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಸ್ವಾಗತಿಸಿ,ಸಿ.ರ್.ಸಿ 

ಸಂಯೋಜಕೆಯಾದ ಶ್ರೀಮತಿ ಶಶಿಪ್ರಭ ವಂದಿಸಿದರು.ಶಾಲಾ ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ 

ಕಾರ್ಯಕ್ರಮ ನಿರೂಪಿಸಿದರು.








































No comments:

Post a Comment