15.8.23

ಸ್ವಾತಂತ್ರ್ಯ ದಿನಾಚರಣೆ

 ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ


ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಬಹಳ ವಿಜೃಂಭಣೆ ಯಿಂದ ಜರಗಿತು. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು  ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ನೆರವೇರಿಸಿದರು. ವಾರ್ಡು ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮಾಯಿಲ್ ಸಭಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದರು, ಶಾಲಾ ರಕ್ಷಕ ಶಿಕ್ಷಕ  ಸಂಘದ ಅಧ್ಯಕ್ಷರಾದ ಶ್ರೀ ವಿಠಲ, ಮಾತೃ ಸಂಘದ ಅಧ್ಯಕ್ಷೆ  ಶ್ರೀಮತಿ ಚೇತನ , ಕುಡಾಲು ಮೇರ್ಕಳ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ದುಲ್ ಕಾದರ್ ,ಮಾಜಿ ವಾರ್ಡು ಸದಸ್ಯರಾದ ಶ್ರೀ ಎಂ.ಕೆ.ಅಮೀರ್, ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು  ತಿಳಿಸಿದರು.  ಮಕ್ಕಳಿಂದ ವಿವಿಧ ಡ್ರಿಲ್,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.  ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಅಧ್ಯಾಪಿಕೆ  ಶ್ರೀಮತಿ ಡೆಫ್ನಿ ಸ್ಮಿತಾ  ಡಯಾಸ್ ನಿರೂಪಿಸಿದರು. ಅಧ್ಯಾಪಕರಾದ ಶ್ರೀ ಜಯಪ್ರಸಾದ್ ವಂದಿಸಿದರು.  ರಕ್ಷಕ ಶಿಕ್ಷಕ  ಸಂಘ, ಮಾತೃ ಸಂಘ, ಊರ ಸಂಘ ಸಂಸ್ಥೆಗಳು, ಅಧ್ಯಾಪಕ ವೃಂದ ಸಹಕರಿಸಿದರು.

9.8.23

ಕ್ವಿಟ್ ಇಂಡಿಯಾ ಹಾಗೂ ಯುದ್ಧ ವಿರೋಧಿ ದಿನಾಚರಣೆ


ಕ್ವಿಟ್ ಇಂಡಿಯಾ ಹಾಗೂ ಯುದ್ಧ ವಿರೋಧಿ ದಿನಾಚರಣೆ






ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಕ್ವಿಟ್ ಇಂಡಿಯಾ ಹಾಗೂ ಯುದ್ಧ ವಿರೋಧಿ ದಿನಾಚರಣೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರೋಶಿಮಾ ನಾಗಸಾಕಿ ದಿನಾಚರಣೆ ಮಹತ್ವ , ಯುದ್ಧ ವಿರುದ್ಧ ದಿನಾಚರಣೆ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ವಿಜ್ಞಾನ ಸಂಘದ ಸಂಚಾಲಕರಾದ ಜಯಪ್ರಸಾದ್ ಹಿರೋಶಿಮಾ ನಾಗಸಾಕಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸಡಾಕೋ ಪಕ್ಷಿ ನಿರ್ಮಾಣ , ಹಿರೋಶಿಮಾ ನಾಗಸಾಕಿ ಅಣುಬಾಂಬು ದಾಳಿಯ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ದೃಶ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ವಿವರಿಸಿದರು.ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.




 

 

CONGRATULATIONS 



11.7.23

 

ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ

 





 ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಶಾಲಾ ಚಟುವಟಿಕೆಗಳು ಹಾಗೂ ಶೈಕ್ಷಣಿಕ ವಿಚಾರಗಳನ್ನು ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ವಿಠಲ.ಕೆ ಹಾಗೂ ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಚೇತನ ಪುನರ್ ಆಯ್ಕೆಗೊಂಡರು. ಎಸ್.ಎಸ್.ಜಿ ಸದಸ್ಯರು, ಕುಡಾಲು ಮೇರ್ಕಳ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ದುಲ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ವೃಂದ, ರಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಿಕೆ ಶ್ರೀಮತಿ ಡೆಪ್ನಿ ಸ್ಮಿತಾ ಡಯಾಸ್ ಸ್ವಾಗತಿಸಿ ಅಧ್ಯಾಪಕರಾದ ಶ್ರೀ ಜಯಪ್ರಸಾದ್ ವಂದಿಸಿದರು.



26.6.23

ವಿಶ್ವ ಮಾದಕ ವಸ್ತು ದಿನಾಚರಣೆ

 

ವಿಶ್ವ ಮಾದಕ ವಸ್ತು ದಿನಾಚರಣೆ


ಬಿ.ಪಿ.ಪಿ..ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ
ಬಿ.ಪಿ.ಪಿ..ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಜರಗಿತು.  ಶಾಲಾ ಅಸೆಂಬ್ಲಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಮಾದಕ ವಸ್ತು ದಿನಾಚರಣೆ ಪ್ರಾಮುಖ್ಯತೆ ಕುರಿತು ತಿಳಿಸಿದರು . ಅಧ್ಯಾಪಕರಾದ ಜಯಪ್ರಸಾದ್ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರತಿಜ್ಞೆ ಹೇಳಿಕೊಟ್ಟರು .ವಿಜ್ಞಾನ ಸಂಘ ನೇತೃತ್ವದಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಾದ ವಿಡಿಯೋ ಹಾಗೂ ಚಿತ್ರ ಪ್ರದರ್ಶನ ಜರಗಿತು. ಮಕ್ಕಳಿಗೆ ಪೋಸ್ಟರ್ ರಚಿಸುವ ಚಟುವಟಿಕೆಯು ನಡೆಯಿತು. ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.