7.6.22

    
    ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ "ಒಂದೇ ಒಂದು ಭೂಮಿ" ಪರಿಸರ ಕಾರ್ಯಾಗಾರವನ್ನು ಶ್ರೀ ಮುರಳಿ ಮಾಧವ ಪೆಲ್ತಾಜೆ ಪರಿಸರ ಸಂರಕ್ಷರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ಚಿತ್ರಗಾರ ಶ್ರೀ ವಿಶ್ವಾಸ್.ಎಂ ಪೆರಿಯಪ್ಪಾಡಿ,  ಚೇವಾರು ಶಾಲಾ ಅಧ್ಯಾಪಕರಾದ  ಶ್ರೀ ಪ್ರಸಾದ್ ರೈ ಮುಗು ,ರಕ್ಷಕರು, ಮಕ್ಕಳು ಭಾಗವಹಿಸಿದರು.   ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ  ಮುರಳಿ ಮಾಧವ ಪೆಲ್ತಾಜೆಯವರಿಗೆ ಶಾಲು ಹೊದಿಸಿ ಗೌರವಿಸಿದರು. ಶಾಲಾ ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.

 


    ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪರಿಸರೋತ್ಸವ 2022 ಕಾರ್ಯಕ್ರಮ ಜರಗಿತು. ಪರಿಸರೋತ್ಸವ 2022 ಭಾಗವಾಗಿ "ಶಾಲೆಗೊಂದು ವಿದ್ಯಾವನ "ಕಾರ್ಯಕ್ರಮ ಜರಗಿತು. ವೈವಿಧ್ಯಮಯವಾದ ವಿವಿಧ ಗಿಡಗಳನ್ನು ಶಾಲಾ ಪರಿಸರದಲ್ಲಿ  ನೆಟ್ಟು ಪರಿಸರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ , ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಚೇತನ, ರಕ್ಷಕರು, ಮಕ್ಕಳು ಹಾಗೂ ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು

 

1.6.22

 ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ

    ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ , ವಿವಿಧ ಮನೋರಂಜನ ಕಾರ್ಯಕ್ರಮಗಳೊಂದಿಗೆ ಜರಗಿತು. ವಾರ್ಡು ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮಾಯಿಲ್, ಶಾಲಾ ಪ್ರಬಂಧಕರಾದ ಶ್ರೀ ಇ. ರವಿಶಂಕರ ಭಟ್, ಮಾಜಿ ವಾರ್ಡು ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪೈವಳಿಕೆ ಗ್ರಾಮ ಪಂಚಾಯತು ಶ್ರೀ ಎಂ.ಕೆ.ಅಮೀರ್, ಶಾಲಾ ನಿವೃತ್ತ  ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶಾರದ .ಎ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಚೇತನ , ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾರ್ಯಕ್ರಮವನ್ನು ವಾರ್ಡು ಸದಸ್ಯೆ  ಶ್ರೀಮತಿ ಇರ್ಷಾನ ಇಸ್ಮಾಯಿಲ್ ಉದ್ಘಾಟಿಸಿ ನವಾಗತ ಮಕ್ಕಳಿಗೆ ಕಲಿಕೋಪರಕರಣ ಕಿಟ್ ವಿತರಿಸಿ ಸ್ವಾಗತಿಸಿ ಶುಭಹಾರೈಸಿದರು. ಮಾಜಿ ವಾರ್ಡು ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪೈವಳಿಕೆ ಗ್ರಾಮ ಪಂಚಾಯತು ಶ್ರೀ ಎಂ.ಕೆ.ಅಮೀರ್, ಶಾಲಾ ಪ್ರಬಂಧಕರಾದ ಶ್ರೀ ಇ. ರವಿಶಂಕರ ಭಟ್,  ಶಾಲಾ  ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ .ಎ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಚೇತನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.  ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಸ್ವಾಗತಿಸಿದರು. ಸ್ಮಿತಾ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.