6.5.24

LSS Winner 2023-24



LSS Winner 2023-24

2023-2024 ಶೈಕ್ಷಣಿಕ ವರ್ಷದ ಎಲ್.ಎಸ್.ಎಸ್. ಪರೀಕ್ಷೆಯನ್ನು 

ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿ ವಿದ್ಯಾರ್ಥಿವೇತನಕ್ಕೆ ಅರ್ಹಳಾದ 

ಬಿ.ಪಿ .ಪಿ.ಎ ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿನಿ ಬ್ಲೆಸ್ಸಿಕ ಪ್ರೇಯಲ್ .ಆರ್ 

ಈಕೆ ಪೆರ್ಮುದೆ ಪೀಟರ್ ರೋಡ್ರಿಸ್ ಹಾಗೂ ಶ್ರೀಮತಿ ಡೆಫ್ನಿ ಸ್ಮಿತಾ 

ಯಾಸ್ ದಂಪತಿಯರ ಸುಪುತ್ರಿ

ಶಾಲಾ ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯರು, ಪಿ.ಟಿ.ಎ ಎಂ.ಪಿ.ಟಿ.

ಶಾಲಾ ಅಧ್ಯಾಪಕ ವೃಂದ , ವಿದ್ಯಾರ್ಥಿಗಳು ಅಭಿನಂದಿಸಿದರು.




17.3.24


ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಪ್ರತಿಭಾ ಪ್ರದರ್ಶನ


ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜರಗಿತು.


2023-24 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಕಲಿಕಾ ದಾಖಲೆಗಳ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ


ಚಾಲನೆ ನೀಡಲಾಯಿತು. ಕಲಿಕಾ ದಾಖಲೆಗಳ ಪ್ರದರ್ಶನವನ್ನು ಮುಖ್ಯ ಅತಿಥಿಗಳಾದ ಶ್ರೀ ಪ್ರಸನ್ನ ಕೇಶವ


ಕುರುವೇರಿ (TV9 ಕನ್ನಡ ಉಪ ಸಂಪಾದಕರು) ಉದ್ಘಾಟಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಳಿಕ ಸಭಾ


ಕಾರ್ಯಕ್ರಮ ಜರಗಿತು. ವಾರ್ಡ್ ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮೈಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು


ಮುಖ್ಯ ಅತಿಥಿಗಳಾದ ಶ್ರೀ ಪ್ರಸನ್ನ ಕೇಶವ ಕುರುವೇರಿ ಇವರು ಉದ್ಘಾಟಿಸಿ ಕಲಿಕೆಯ ಪ್ರಾಮುಖ್ಯತೆಯನ್ನು


ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು .ರಕ್ಷಕ ಶಿಕ್ಷಕ


ಸಂಘದ ಅಧ್ಯಕ್ಷರಾದ ಶ್ರೀ ವಿಠ್ಠಲ ,ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಚೇತನ ಎಸ್.ಎಸ್.ಜಿ ಸದಸ್ಯರಾದ ಶ್ರೀ


ಅಬ್ದುಲ್ ಖಾದರ್ ಎಂಬಿವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಲ್ಮಾಹಿರ್ ಅರಬಿಕ್ ಸ್ಕಾಲರ್ಶಿಪ್


ಪರೀಕ್ಷೆಯಲ್ಲಿ ವಿಜಯಿಯಾದ ನಾಲ್ಕನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಶಮ್ಮಸ್ ಗೆ ಅತಿಥಿಗಳು ಪ್ರಶಸ್ತಿ ಫಲಕ


ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಿದರು. ತದನಂತರ ಮಕ್ಕಳಿಂದ ವಿವಿಧ ಕಲಿಕಾ ಸಾಧನೆಗಳ


ಪ್ರದರ್ಶನ ಜರುಗಿತು. ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಸಾದ್ ಕಾರ್ಯಕ್ರಮವನ್ನು

ನಿರೂಪಿಸಿ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ವಂದಿಸಿದರು.