ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಪೆರ್ಮುದೆ : ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ಜರಗಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ವರ್ಣರಂಜಿತ ಮೆರವಣಿಗೆ ಜರಗಿತು. ಪೈವಳಿಕೆ ಗ್ರಾಮ ಪಂಚಾಯತಿನ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಎಂ.ಕೆಅಮೀರ್ ಅಲಿ ಧ್ವಜಾರೋಹಣ ಗೈದರು. ಬಳಿಕ ಸಭಾ ಕಾರ್ಯಕ್ರಮ ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಅಧ್ಯಕ್ಷತೆ ವಹಿಸಿದರು.ಶಾಲಾ ವ್ಯವಸ್ಥಾಪಕರಾದ ಶ್ರೀ ಇ. ರವಿಶಂಕರ ಭಟ್, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಭಾರತಿ, ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲುಗುತ್ತು, ಶ್ರೀ ರಾಮ ಪೂಜಾರಿ, ಆನಂದ ನಾಯಕ್ ಎಂಬಿವರು ಉಪಸ್ಥಿತರಿದ್ದರು.ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಗಣ್ಯ ವ್ಯಕ್ತಿಗಳು ಬಹುಮಾನ ವಿತರಿಸಿದರು.ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಪೆರ್ಮುದೆ ಅಟೋ ಚಾಲಕರು, ವ್ಯಾಪಾರಿ ಏಕೋಪನ ಸಮಿತಿ ಸದಸ್ಯರು, ಪಿ.ಟಿ.ಎ, ಎಂ.ಪಿ.ಟಿ.ಎ ಸದಸ್ಯರು, ಶ್ರೀ ದುರ್ಗಾ ಭಜನಾ ಮಂದಿರ ಪೆರ್ಮುದೆ ಸದಸ್ಯರು ಎಂಬಿವರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು. ಅಧ್ಯಾಪಕರಾದ ಜಯಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಸದಾಶಿವ.ಕೆ.ಕೆ ಸ್ವಾಗತಿಸಿ ಶ್ರುತಿ ಟೀಚರ್ ವಂದಿಸಿದರು.
|
ಪೈವಳಿಕೆ ಗ್ರಾಮ ಪಂಚಾಯತಿನ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಎಂ.ಕೆಅಮೀರ್ ಅಲಿ ಧ್ವಜಾರೋಹಣ ಗೈದರು |
|
Independence day Speech By Anushree |