.
ಪೆರ್ಮುದೆ: ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಙ ಕಾರ್ಯಕ್ರಮವು ನಡೆಯಿತು.ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಮೊಹಮ್ಮದ್ ಅಲಿ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ ,ಶಾಲಾ ಪ್ರಬಂಧಕರು ಶ್ರೀ ರವಿಶಂಕರ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಖಾದರ್ ಮಾಸ್ಟರ್, ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಙದ ಶಾಲಾ ಮಟ್ಟದ ಸಮಿತಿಗೆ ರೂಪುನೀಡಲಾಯಿತು.
ಮಂಜೇಶ್ವರ ಶಾಸಕರಾದ ಶ್ರೀ ಪಿ.ಬಿ.ಅಬ್ದುಲ್ ರಝಾಕ್ ಪ್ರಧಾನ ರಕ್ಷಾಧಿಕಾರಿಯಾಗಿಯೂ, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ.ಶೆಟ್ಟಿ ರಕ್ಷಾಧಿಕಾರಿಯಾಗಿರುವ ಸಮಿತಿಗೆ ಪೈವಶಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿಸ್ಥಾಯಿ ಸಮಿತಿ ಚೆಯರ್ ಮಾನ್ ಶ್ರೀ ಎಂ.ಕೆ ಅಮೀರ್ ಚೆಯರ್ ಮಾನ್ ಆಗಿಯೂ, ಶಾಲಾ ಪ್ರಬಂಧಕರಾದ ಶ್ರೀ ರವಿಶಂಕರ ಭಟ್ ಪ್ರಧಾನ ಸಂಚಾಲಕರಾಗಿಯೂ , ಉಪ ಸಂಚಾಲಕರಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಮೊಹಮ್ಮದ್ ಅಲಿ ,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ಕನ್ವೀನರ್ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ, ಜೊತೆ ಕನ್ವೀನರ್ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್,ಎಂಬಿವರನ್ನು ಆಯ್ಕೆಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ,ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕುಟುಂಬಶ್ರೀ, ಪಿ.ಟಿ.ಎ, ಸದಸ್ಯರನ್ನೂಳಗೊಂಡ ಸಮಿತಿಗೆ ರೂಪುನೀಡಲಾಯಿತು.ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಪ್ರತಿಜ್ಙೆಯನ್ನು ಕೈಗೊಳ್ಳಲಾಯಿತು. ಸದಾಶಿವ ಮಾಸ್ಟರ್ ಪೊಯ್ಯೆ ಸ್ವಾಗತಿಸಿ ಜಯಪ್ರಸಾದ್ ವಂದಿಸಿದರು