15.8.24

78ನೇ ಸ್ಪಾತಂತ್ರ್ಯ ದಿನಾಚರಣೆ

 ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣ


























ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಮೆರವಣಿಗೆಯೊಂದಿಗೆ ಬಹಳ ವಿಜೃಂಭಣೆ ಯಿಂದ ಜರಗಿತುಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ನೆರವೇರಿಸಿದರುವಾರ್ಡು ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮಾಯಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದರು, ,ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ.ಕೆ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಸುನಿತ ಪ್ರೀ ಪ್ರೈಮರಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ,ಕುಡಾಲು ಮೇರ್ಕಳ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ದುಲ್ ಖಾದರ್ ಉಪಸ್ಥಿತರಿದ್ದರುಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ತಿಳಿಸಿದರುವಯನಾಡಿನ ಮಹಾ ದುರಂತದ ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆಯನ್ನು ನಡೆಸಲಾಯಿತುಮಕ್ಕಳಿಂದ ವಿವಿಧ ಡ್ರಿಲ್,ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತುಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ  ಅತಿಥಿಗಳು  ಬಹುಮಾನಗಳನ್ನು ವಿತರಿಸಿದರುಊರ ಸಂಘ ಸಂಸ್ಥೆಗಳುರಕ್ಷಕರು ಅಧ್ಯಾಪಕ ವೃಂದ ಸಹಕರಿಸಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಸ್ವಾತಿ ಸ್ವಾಗತಿಸಿದರು. ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತ ಡಯಾಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು.