16.2.15

ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ  ಸಮಾರಂಭದ ಕೆಲವು ನೋಟಗಳು.....






















ಬಿ.ಪಿ.ಪಿ.ಎ.ಎಲ್.ಪಿ ಶಾಲೆ ಪೆರ್ಮುದೆ 120 ರ ಸಂಭ್ರಮ : ಶಾಲಾ  ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭ .

ಪೆರ್ಮುದೆ : ಬಿ.ಪಿ.ಪಿ.ಎ.ಎಲ್.ಪಿ  ಪೆರ್ಮುದೆ ಶಾಲಾ  ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭ ಬಹಳ ವಿಜೃಂಭ್ರಣೆಯಿಂದ ಜರಗಿತು.
    14 ಫೆಬ್ರವರಿಯಂದು ಬೆಳಗ್ಗೆ ಎಂ.ಪಿ.ಟಿ ಎ ಅಧ್ಯಕ್ಷೆ ಸುಮತಿ  ಧ್ವಜಾರೋಹಣ ಗೈದು ಶಾಲಾ  ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.ಸಂಜೆ 6 ಗಂಟೆಗೆ ಸಭಾಕಾರ್ಯಕ್ರಮಗಳು ಪ್ರಾರಂಭಗೊಂಡವು. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮಣಿಕಂಠ ರೈ ಕಾರ್ಯಕ್ರಮವನ್ನು ದೀಪಬೆಳಗಿಸಿ  ಉದ್ಘಾಟಸಿದರು. ಶಾಲಾ ವ್ಯವಸ್ಥಾಪಕರು  ಶ್ರೀ ರವಿಶಂಕರ ಭಟ್. ಇ,  ಶ್ರೀ ನರಹರಿ.ಪಿ , ಶ್ಯಾಮ್ ಭಟ್,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್,ಪಿ.ಟಿ.ಎ  ಅಧ್ಯಕ್ಷರಾದ ಶ್ರೀ ರಾಮಪ್ರಕಾಶ್, ಎಂ.ಪಿ.ಟಿ.ಎ  ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಎಂಬಿವರು ಉಪಸ್ಥಿತರಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್ ರವರು ಮಾತನಾಡುತ್ತಾ"ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಿ "ಎಂದರು.ವಾರ್ಡ ಸದಸ್ಯೆ  ಶ್ರೀಮತಿ ತೆರೆಸಾ ಡಿಸೋಜ ರವರು ಈ ವರ್ಷ ಸೇವೆಯಿಂದ ನಿವೃತ್ತಿಹೊಂದಲಿರುವ ಅರಬಿಕ್  ಅಧ್ಯಾಪಿಕೆ ಜಮೀಲ ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.ಮುಖ್ಯೋಪಾಧ್ಯಾಯಿನಿ ಶಾರದ ರವರು ಎಲ್ಲರನ್ನು ಸ್ವಾಗತಿಸಿದರು. ಕಲಿಕೆಯಲ್ಲಿ ಎ ಗ್ರೇಡ್ ಲಭಿಸಿದ  ವಿದ್ಯಾರ್ಥಿಗಳಿಗೆ , ಆಟೋಟ ಸ್ಪರ್ಧೆಗಳಲ್ಲಿ, ವಿವಿಧ ಮೇಳಗಳಲ್ಲಿ  ಭಾಗವಹಿಸಿ ಬಹುಮಾನ ಪಡೆದ  ವಿದ್ಯಾರ್ಥಿಗಳಿಗೆ  ಪ್ರಮಾನ ಪತ್ರ ಹಾಗೂ ಪದಕಗಳನ್ನು ನೀಡಲಾಯಿತು.ನಂತರ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.