12.2.16




ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪೆರ್ಮುದೆ :  ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲಿಕೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆ ಸೆಮಿನಾರ್ ಮಂಡನೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ....



11.2.16





ಪೈವಳಿಕೆ ಪಿ.ಇ.ಸಿ ಮಟ್ಟದ ಕಲಿಕೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆ ಸೆಮಿನಾರ್ ಮಂಡನೆಯಲ್ಲಿ ದ್ವಿತೀಯ ಸ್ಥಾನ  ಪಡೆದುಕೊಂಡಿದೆ. 


ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ ವಾರ್ಷಿಕೋತ್ಸವ 

ಪೆರ್ಮುದೆ : ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರಗಿತು. ಶಾಲಾ ವ್ಯವಸ್ಥಾಪಕರಾದ ಇ .ರವಿಶಂಕರ್ ಭಟ್ ಧ್ವಜಾರೋಹಣ ಗೈದು   ಶಾಲಾ ವಾರ್ಷಿಕೋತ್ಸವಕ್ಕೆ  ಚಾಲನೆ ನೀಡಿದರು. ಬಳಿಕ ಹಳೆವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ದೆ ಜರಗಿತು. ಸಂಜೆ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ  ಎನ್. ನಂಧಿಕೇಶನ್ ಉದ್ಘಾಟಿಸಿದರು.ವಾರ್ಡ ಸದಸ್ಸರಾದ ಶ್ರೀ  ಯಂ.ಕೆ ಅಮೀರ್ ಅಧ್ಯ್ಯಕ್ಷತೆ ವಹಿಸಿದರು.ಶಾಲಾ ವ್ಯವಸ್ಥಾಪಕರಾದ ಶ್ರೀ  ಇ .ರವಿಶಂಕರ್ ಭಟ್, ಹರೀಶ್ ಬೊಟ್ಟಾರಿ, BPO , BRC ಮಂಜೇಶ್ವರ   ಶ್ರೀ ವಿಜಯಕುಮಾರ್.ಪಿ , ಶ್ರೀ ಡಿ. ದಾಮೋದರನ್ (ಮೇನೇಜರ್ ಕನ್ವ ಗ್ರೋಪ್ ಓಫ್ ಕಂಪನಿ ಮಂಗಳೂರು,) ಶ್ರೀ . ಅಬ್ದುಲ್ ಖಾದರ್(Rtrd HM ಎ.ಎಲ್.ಪಿ ಶಾಲೆ ಕುಡಾಲು), ಶ್ರೀ  ರಾಮ್ ಪ್ರಕಾಶ್ (ಪಿ.ಟಿ.ಎ ಅಧ್ಯಕ್ಷರು), ಶ್ರೀಮತಿ ಕುಸುಮ ( ಯಂ. ಪಿ.ಟಿ.ಎ ಅಧ್ಯಕ್ಷೆ), ಶ್ರೀ ಸತೀಶ್ ರೈ ಕುಡಾಲುಗುತ್ತು, ಪಿ.ಟಿ.ಎ ಅಧ್ಯಕ್ಷರು ಪ್ರೀ ಪ್ರೈಮರಿ ಶಾಲೆ,ಪೆರ್ಮುದೆ
ಲಕ್ಷ್ಮಿನಾರಾಯಣ ಭಟ್ (Rtrd HM ಎ.ಯು ಶಾಲೆ ಧರ್ಮತ್ತಡ್ಕ ಮಹಾಲಿಂಗ ಭಟ್ HM A U P S ಧರ್ಮತ್ತಡ್ಕ ಎಂಬಿವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಸ್ವಾಗತಿಸಿದರು, ಅಧ್ಯಾಪಕರಾದ ಸದಾಶಿವ ಕೆ.ಕೆ  ಕಾರ್ಯಕ್ರಮವನ್ನು ನಿರೂಪಿಸಿದರು.ಅಬ್ದಲ್ ಮುನೀರ್ ವಂದಿಸಿದರು.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳು ಜರಗಿತು.