ಪೆರ್ಮುದೆ ಶಾಲೆಗೆ ಸಮಗ್ರ ಪ್ರಶಸ್ತಿ ವಿಜಯೋತ್ಸವ ಮೆರವಣಿಗೆ
ಇತ್ತೀಚೆಗೆ ಕಾಯರ್ ಕಟ್ಟೆ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ವೃತ್ತಿ ಪರಿಚಯ ಮೇಳ ಮತ್ತು ಗಣಿತ ಮೇಳಗಳಲ್ಲಿ ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯು ಎಲ್.ಪಿ ವಿಭಾಗದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವೃತ್ತಿ ಪರಿಚಯ ಮೇಳದಲ್ಲಿ ಮೆಟಲ್ ಎನ್ ಗ್ರೇವಿಂಗ್ ನಲ್ಲಿ ಮೊಹನ್ ಕುಮಾರ್ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಶೀಟ್ ಮೆಟಲ್ ವರ್ಕ್ ನಲ್ಲಿ ಮೊಹಮ್ಮದ್ ಫಾಯಿಝ್ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಕೋಕನೆಟ್ ಶೆಲ್ ಪ್ರೋಡೆಕ್ಟನಲ್ಲಿ ಮೊಹಮ್ಮದ್ ಸಮ್ಮಾಸ್ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಬೀಡ್ಸ ವರ್ಕ್ ನಲ್ಲಿ ಶ್ರಾವ್ಯ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಸ್ಟಪ್ಡೆಡ್ ಟೋಯ್ಸನಲ್ಲಿ ಹರ್ಷಿಣಿ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ತ್ರೆಡ್ ಪೇಟೆರ್ನ್ ನಲ್ಲಿ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಪಾಮ್ ಲೀವ್ ಪ್ರೋಡೆಕ್ಟನಲ್ಲಿ ಕುಸುಮಪ್ರಿಯ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಚೋಕ್ ತಯಾರಿಕೆಯಲ್ಲಿ ಮೊಹಮ್ಮದ್ ಮುಬೀನ್ 'ಎ' ಗ್ರೇಡ್ ಪಡೆದು ಶಾಲೆಗೆ ಸಮಗ್ರ ಪ್ರಶಸ್ತಿ ತಂದುಕೊಟ್ಟರು.
ಅದೇ ರೀತಿ ಗಣಿತ ಮೇಳದಲ್ಲಿ ಜೋಮೆಂಟ್ರಿಕ್ ಚಾರ್ಟ್ ನಲ್ಲಿ ಸಿಶ್ಮತ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ,ಗಣಿತ ಮಾದರಿಯಲ್ಲಿ ಮೊಹಮ್ಮದ್ ಇರ್ಫಾನ್ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನಗಳಿಸುವುದರೊಂದಿಗೆ ಗಣಿತ ಮೇಳದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯು ಲಭಿಸಿತು. ಮಕ್ಕಳ ಸಾಧನೆಗೆ ಪಿ.ಟಿ.ಎ , ಎಂ.ಪಿ.ಟಿ.ಎ, ಅಧ್ಯಾಪಕ ವೃಂದ ಅಭಿನಂದನೆಗಳೊಂದಿಗೆ ಪೆರ್ಮದೆ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು