10.7.17



ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯ ಪಿ.ಟಿ.ಎ ,  ಹಾಗೂ ವಿದ್ಯಾಭ್ಯಾಸ ಇಲಾಖೆಯ ಸಹಯೋಗದೊಂದಿಗೆ  ಶಾಲೆಗೆ ಗ್ಯಾಸ್ ಒಲೆಯ ವ್ಯವಸ್ಥೆ ಮಾಡಲಾಯಿತು.



ಪಿ.ಟಿ.ಎ , ಎಂ.ಪಿ.ಟಿ.ಎ   ಸಹಯೋಗದೊಂದಿಗೆ  ಪೆರ್ಮುದೆ ಶಾಲೆಯಲ್ಲಿ ಉಪ್ಪು ಸೋಲೆ ಕಾರ್ಯಾಗಾರ
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪಿ.ಟಿ.ಎ , ಎಂ.ಪಿ.ಟಿ.ಎ   ಸಹಯೋಗದೊಂದಿಗೆ  ಶಾಲೆಯಲ್ಲಿ ಹಲಸಿನ ಕಾಯಿ ಉಪ್ಪು ಸೋಲೆ ಕಾರ್ಯಾಗಾರ ಜರಗಿತು. ಪಿ.ಟಿ.ಎ , ಎಂ.ಪಿ.ಟಿ.ಎ   ಸದಸ್ಯರು, ಶಾಲಾ ಶಿಕ್ಷಕ ವೃಂಧ ಕಾರ್ಯದಲ್ಲಿ ಪಾಲ್ಗೊಂಡರು.


                               ಪಿ.ಟಿ.ಎ  ಸಹಯೋಗದೊಂದಿಗೆ ತರಕಾರಿ ತೋಟ

ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪರಿಸರದೊಂದಿಗೆ ನಾವು ನಿರ್ಮಲ ಹರಿತ ವಿದ್ಯಾಲಯ   ಯೋಜನೆಯ ಅಂಗವಾಗಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಾಲೆಯಲ್ಲಿ ವಿಷ ಮುಕ್ತ ತರಕಾರಿ ತೋಟ ನಿರ್ಮಾಣ ಕೆಲಸಗಳು ಆರಂಭಗೊಂಡವು.ಪಿ.ಟಿ.ಎ ಅಧ್ಯಕ್ಷರಾದ ಶ್ರೀ  ಮೊಹಮ್ಮದಾಲಿ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ  ರಮಣಿ , ಸತೀಶ್ ರೈ ಕುಡಾಲು ಗುತ್ತು , ಜಯರಾಮ ಶೆಟ್ಟಿ ಭಂಡಾರ ಗುತ್ತು  ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶಾರದಾ ಎ ಮೊದಲಾದವರು  ನೇತೃತ್ವ ವಹಿಸಿದರು.


5.7.17

ಯೋಗ ತರಬೇತಿ  
ಯೋಗ ಗುರು  ಪ್ರಕಾಶಾನಂದ ಉಡುಪಿ






ರಕ್ಷಕ ಶಿಕ್ಷಕ ಸಂಘ ಮಾತೃ ಸಂಘಗಳ ಮಹಾಸಭೆ



ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃ ಸಂಘಗಳ ಜಂಟೀ ಮಹಾಸಭೆ ಇತ್ತೀಚೆಗೆ ಜರಗಿತು. ಪೈವಳಿಕೆ ಗ್ರಾಮ  ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ  ಎಂ.ಕೆ. ಅಮೀರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ ವಹಿಸಿಕೊಂಡರು. ಶಾಲಾ ಶೈಕ್ಷಣಿಕ ಬೆಳವಣಿಗೆ ಮಕ್ಕಳ ದಾಖಲಾತಿಯ ಹೆಚ್ಚಳ ಮೊದಲಾದ ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
            ನೂತನ  ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ಮೊಹಮ್ಮದಾಲಿ, ಉಪಾಧ್ಯಕ್ಷರಾಗಿ ಶ್ರೀ  ಸತೀಶ್ ರೈ ಕುಡಾಲು ಗುತ್ತು, ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ರಮಣಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಉಷಾ ಕುಮಾರಿ  ಆಯ್ಕೆಗೊಂಡರು.ಪ್ರೀ ಪ್ರೈಮರಿ ವಿಭಾಗದ ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ಜಯರಾಮ ರೈ ಕುಡಾಲು ಗುತ್ತು ಅವರನ್ನು ಆರಿಸಲಾಯಿತು.
            ಶಾಲಾ ಚಟುವಟಿಕೆಗಳ ಬಗ್ಗೆ ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ  ಶಾರದಾ ಎ ಮಾಹಿತಿ ನೀಡಿದರು. ಅಧ್ಯಾಪಿಕೆ ಸ್ಮಿತಾ ಡಯಾಸ್ ಸ್ವಾಗತಿಸಿ  ಅಬ್ದುಲ್ ಮುನೀರ್  ವಂದಿಸಿದರು. ಸದಾಶಿವ ಮಾಸ್ಟರ್ ಪೊಯ್ಯೆ ಕಾರ್ಯಕ್ರಮ ನಿರೂಪಿಸಿದರು. 


ಪೆರ್ಮುದೆ ಶಾಲೆಯಲ್ಲಿ ಸಮವಸ್ತ್ರ ವಿತರಣೆ


ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ 2017-18 ನೇ  ಶೈಕ್ಷಣಿಕ  ವರ್ಷದ ಲಭಿಸಿದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ  ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ  ಎಂ.ಕೆ. ಅಮೀರ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವುದರೊಂದಿಗೆ ಉದ್ಘಾಟಿಸಿದರು. ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ  ಶಾರದಾ ಎ,  ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ ಉಪಸ್ಥಿತರಿದ್ದರು.