20.8.17



ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯ ವಿದ್ಯಾರ್ಥಿಗಳು ಕೃಷಿಕರ ದಿನದಂಗವಾಗಿ ಸಂಕಪ್ಪ ಮೂಲ್ಯರ ಕೃಷಿ ಸ್ಥಳಕ್ಕೆ ಬೇಟಿ ನೀಡಿದರು. ನೇಜಿ ನೆಡುವ ವಿಧಾನ ತಿಳಿಸಿಕೊಂಡರು. ಶಾಲಾ ಅಧ್ಯಾಪಕರು ಬಯಲು ಪ್ರವಾಸಕ್ಕೆ ನೇತೃತ್ವವಹಿಸಿದರು.






15.8.17



ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ..

ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಧ್ವಜಾರೋಹಣ ಗೈದರು.ವಾರ್ಡು ಸದಸ್ಯ ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ. ಅಮೀರ್  ಉಪಸ್ಥಿತರಿದ್ದರು,ಬಳಿಕ ವರ್ಣರಂಜಿತ ಮೆರವಣಿಗೆ ಜರಗಿತು. ರಕ್ಷಕರು, ಶಾಲಾ ಹಳೆ ವಿದ್ಯಾರ್ಥಿಗಗಳು ಪಾಲ್ಗೊಂಡರು. ಸಭಾ ಕಾರ್ಯಕ್ರಮದ ಅಧ್ಯಕ್ಷೆಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಸ್ವಾತಂತ್ರ್ಯದಿನದ ಪ್ರಾಧಾನ್ಯ ತಿಳಿಸಿದರು.ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರ್ಮುದೆ ಇದರ ಅಧ್ಯಕ್ಷರಾದ ಶ್ರೀ ರಾಮಚಂದ್ರ ಆಚಾರಿ ಶುಭಹಾರೈಸಿದರು.ಕುಮಾರಿ ಅಂಜಲಿ  ಸ್ವಾತಂತ್ರ್ಯದಿನದ ಪ್ರಾಧಾನ್ಯ ತಿಳಿಸಿ ಶುಭಹಾರೈಸಿದರು. ಸ್ವಾತಂತ್ರ್ಯದಿನದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ  ಪಿ.ಟಿ.ಎ ಅಧ್ಯಕ್ಷ ಶ್ರೀ ಮೊಹಮ್ಮದಾಲಿ, ಎಂ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ರಮಣಿ, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ಸತೀಶ್ ರೈ ಕುಡಾಲು ಗುತ್ತು ಎಂಬಿವರು ಉಪಸ್ಥಿತರಿದ್ದರು.ಸದಾಶಿವ ಮಾಸ್ಟರ್ ಪೊಯ್ಯೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಮುನೀರ್ ವಂದಿಸಿದರು.









English Speech By Praveeksha


Speech by Nuthan Edakkana

Speech By Shravya

Speech By Anagha.k
ಸ್ವಾತಂತ್ರ್ಯದಿನದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ






















Vandemathadam Dance performance  by 4th std Students

9.8.17

ಮಧುರ ಕನ್ನಡ ಫ್ರೀ ಟೆಸ್ಟ್





ಹಿರೋಶಿಮಾ ನಾಗಸಾಕಿ ದಿನಾಚರಣೆ...