26.7.18



ಚಟುವಟಿಕಾ ಕ್ಯಾಲೆಂಡರ್ 2018-19
ತಿಂಗಳು : ಜುಲಾಯಿ 2018
ದಿನಾಂಕ
ಕಾರ್ಯಕ್ರಮಗಳು
ಚಟುವಟಿಕೆಗಳು
ಜವಾಬ್ದಾರಿ
02-07-2018
ಜುಲಾಯಿ 1  ವೈದ್ಯರ ದಿನ
· ಡೈ ಡೇ ಆಚರಣೆ
·ವೆದ್ಯರ ಸಂದರ್ಶನ
ಅಧ್ಯಾಪಕರು
06- 07- 2018
ಶುಕ್ರವಾರ
ಶಾಲಾ ಮಟ್ಟದ ಮಂತ್ರಿ ಮಂಡಲ ರೂಪೀಕರಣ
·ಚುನಾವಣೆ
·ಮತದಾನ
·ಫಲಿತಾಂಶ ಪ್ರಕಟಣೆ
·ಪ್ರಮಾಣವಚನ ಸ್ವೀಕಾರ
ಅಧ್ಯಾಪಕರು
10- 07- 2018 ಮತ್ತು 11-07-2018

ಆಟದ ಬಿಸಣಿಗೆ ಪ್ರಯೋಗಗಳು

·ವಿವಿಧ ಪ್ರಯೋಗಗಳನ್ನು ಮಾಡುವುದು
·ಪ್ರಯೋಗ ಪ್ರದರ್ಶನ
ವಿಜ್ಞಾನ ಕ್ಲಬ್ ಕನ್ವೀನರ್
ಅಧ್ಯಾಪಕರು

11- 07- 2018
ಬುಧವಾರ
ವಿಶ್ವ ಜನಸಂಖ್ಯಾ ದಿನ ಆಚರಣೆ
·ವಿಶ್ವ ಜನಸಂಖ್ಯಾ ದಿನದ ಕುರಿತು ಮಾಹಿತಿ ನೀಡುವುದು.
ತರಗತಿ ಮಟ್ಟ  ಅಧ್ಯಾಪಕರು
18- 07- 2018
ಬುಧವಾರ
ವಿವಿಧ ಕ್ಲಬ್ ಗಳ ರೂಪೀಕರಣ
·ಸದಸ್ಯರ ಆಯ್ಕೆ
·ಪದಾಧಿಕಾರಿಗ ಆಯ್ಕೆ
Club Convener
21- 07- 2018
ಶನಿವಾರ
ಚಾಂದ್ರ ದಿನ
·ಚಂದ್ರ ಯಾತ್ರೆ ವೀಡಿಯೋ ಪ್ರದರ್ಶನ
·ರಸ ಪ್ರಶ್ನೆ ಸ್ಪರ್ಧೆ
ವಿಜ್ಞಾನ ಕ್ಲಬ್ ಕನ್ವೀನರ್
ಅಧ್ಯಾಪಕರು
27- 07- 2018
ಶುಕ್ರವಾರ
ವಿಶ್ವ ಪರಿಸರ ಸಂರಕ್ಷಣಾ ದಿನ
· ಕ್ಷೇತ್ರ ಪ್ರವಾಸ
·ಪೋಸ್ಟರ್ ತಯಾರಿ
ವಿಜ್ಞಾನ ಕ್ಲಬ್ ಕನ್ವೀನರ್
ಅಧ್ಯಾಪಕರು

31- 07- 2018
ಮಂಗಳವಾರ

S R G ಸಭೆ
·ತಿಂಗಳ ಅವಲೋಕನ
ಎಸ್.ಆರ್.ಜಿ ಕನ್ವೀನರ್
ಮುಖ್ಯೋಪಾಧ್ಯಾಯಿನಿ
ಅಧ್ಯಾಪಕರು




ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪಿ.ಟಿ.ಎ ಮಹಾ ಸಭೆ








2018-19 ನೇ ಶೈಕ್ಷಣಿಕ ವರ್ಷದ ಪಿ.ಟಿ.ಎ ಮಹಾ ಸಭೆಯು ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಜರಗಿತು..ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ , ಪಿ.ಟಿ. ಅಧ್ಯಕ್ಷ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ. ಅಧ್ಯಕ್ಷೆ ಶ್ರೀಮತಿ ರಮಣಿ, ಪ್ರೀ ಪ್ರೈಮರಿ ಪಿ.ಟಿ. ಅಧ್ಯಕ್ಷ ಜಯರಾಮ ಭಂಡಾರಗುತ್ತು, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ದುಲ್ ಖಾದರ್ ಹಾಗೂ ರಕ್ಷಕರು ಉಪಸ್ಥಿತರಿದ್ದರು.ಅಧ್ಯಾಪಕರಾದ ಸದಾಶಿವ ಮಾಸ್ಟರ್ ಪೊಯ್ಯೆ ವರದಿಯನ್ನು ಓದಿದರು. 2018-19 ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಕುರಿತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ತಿಳಿಸಿದರು.
            ನೂತನ ಪಿ.ಟಿ. ಅಧ್ಯಕ್ಷರಾಗಿ ಶ್ರೀ ಸತೀಶ್ ರೈ ಕುಡಾಲು ಗುತ್ತು ,ಹಾಗೂ ಉಪಾಧ್ಯಕ್ಷರಾಗಿ ಶ್ರಿ ವಿಟ್ಟಲ.ಕೆ, ಎಂ.ಪಿ.ಟಿ. ಅಧ್ಯಕ್ಷೆಯಾಗಿ ಶ್ರೀಮತಿ ರಮಣಿ, ಪ್ರೀ ಪ್ರೈಮರಿ ಪಿ.ಟಿ. ಅಧ್ಯಕ್ಷರಾಗಿ ಶ್ರೀ ಮೊಹಮ್ಮದಾಲಿ ಆಯ್ಕೆಯಾದರು.ಒಂಬತ್ತು ಮಂದಿ ಒಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಅಧ್ಯಾಪಕರಾದ ಸದಾಶಿವ ಮಾಸ್ಟರ್ ಪೊಯ್ಯೆ ನಿರೂಪಿಸಿದರು.ಜಯಪ್ರಸಾದ್ ವಂದಿಸಿದರು.


ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಹಲೋ ಇಂಗ್ಲೀಷ್ ಉದ್ಘಾಟನೆ




















ಇಂಗ್ಲೀಷ್ ಭಾಷೆಯಲ್ಲಿ ಅಭಿರುಚಿ ಮೂಡಿಸುವ ಅಂಗವಾಗಿ ಕೇರಳ ಸರಕಾರ ಜಾರಿಗೊಳಿಸಿದ ಹಲೋ ಇಂಗ್ಲೀಷ್ ಕಾರ್ಯಕ್ರಮದ ಉದ್ಘಾಟನೆಯು ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಜರಗಿತು. ವಿದ್ಯಾರ್ಥಿಗಳು ವಿವಿಧ ಇಂಗ್ಲೀಷ್ ಅಭಿನಯ ಗೀತೆಗಳನ್ನು ಹಾಡಿದರು. ಹಲೋ ಇಂಗ್ಲೀಷ್ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ದುಲ್ ಖಾದರ್ ನೆರವೇರಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ , ಪಿ.ಟಿ. ಅಧ್ಯಕ್ಷ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ. ಅಧ್ಯಕ್ಷೆ ಶ್ರೀಮತಿ ರಮಣಿ, ಪ್ರೀ ಪ್ರೈಮರಿ ಪಿ.ಟಿ. ಅಧ್ಯಕ್ಷ ಜಯರಾಮ ಭಂಡಾರಗುತ್ತು ಹಾಗೂ ರಕ್ಷಕರು ಉಪಸ್ಥಿತರಿದ್ದರು. ಶಾಲಾ ಅಧ್ಯಪಿಕೆ ಡೆಫ್ನಿ ಸ್ಮಿತಾ ಡಯಾಸ್ ಕಾರ್ಯಕ್ರಮ ನಿರೂಪಿಸಿದರು.