7.2.18

   ಪ್ರತಿಭಾ ಪುರಸ್ಕಾರ





                                          
ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ  ಮಿಂಚಿದ  

ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ ಹಳೆ ವಿದ್ಯಾರ್ಥಿನಿ  ಪ್ರಸ್ತುತ ಪೆರ್ಲ 

ಸತ್ಯನಾರಾಯಣ  ಹೈಸ್ಕೂಲಿನ ವಿದ್ಯಾರ್ಥಿನಿ ಕುಮಾರಿ ಚೈತ್ರಾಂಜಲಿಗೆ ಶಾಲಾ 

ವಾರ್ಷಿಕೋತ್ಸವದ  ಸಂಧರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ 

ಗೌರವಿಸಲಾಯಿತು.


ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ ವಾರ್ಷಿಕೋತ್ಸವ





ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ 123 ನೇ ವಾರ್ಷಿಕೋತ್ಸವ ಫೆಬ್ರವರಿ 3 ನೇ ತಾರಿಕಿನಂದು ಬಹಳ ವಿಜೃಂಭಣೆಯಿಂದ ಜರಗಿತು.ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡಿತು.ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ಉದ್ಘಾಟಿಸಿದರು.  ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ. ಅಮೀರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮಂಜೇಶ್ವರ ಉಪಜಿಲ್ಲಾ ಬಿ.ಪಿ.ಒ ಶ್ರೀ ವಿಜಯಕುಮಾರ್, ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರಾದ ಶ್ರೀ ಸತೀಶ್ ಶೆಟ್ಟಿ, ಶಾಲಾ ಪ್ರಭಂಧಕರಾದ ಶ್ರೀ ಇ. ರವಿಶಂಕರ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ ಎ,  ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಂ ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ರಮಣಿ, ಪ್ರೀ ಪೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಜಯರಾಮ ಶೆಟ್ಟಿ ಭಂಡಾರ ಗುತ್ತು, ಎಂಬಿವರು ಉಪಸ್ಥಿತರಿದ್ದರು.
       ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಙದ ಕುರಿತು ತಿಳಿಸಿದರು. ಮಂಜೇಶ್ವರ  ಉಪಜಿಲ್ಲಾ ಬಿ.ಪಿ.ಒ ಶ್ರೀ ವಿಜಯಕುಮಾರ್ ಶಾಲೆಯ ಹಿರಿಮೆಗಳನ್ನು ಹೊಗಳಿ ಶುಭಹಾರೈಸಿದರು.ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ ಎಂದು ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರಾದ ಶ್ರೀ ಸತೀಶ್ ಶೆಟ್ಟಿ ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. , ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ. ಅಮೀರ್  ಅಧ್ಯಕ್ಷೀಯ ಭಾಷಣ ಮಾಡಿದರು.ರಕ್ಷಕರಿಗೆ, ಶಾಲಾ ಹಳೆವಿದ್ಯಾರ್ಥಿಗಳಿಗೆ, ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ, ಕಲಿಕೆಯಲ್ಲಿ  ಉತ್ತಮ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಿಗೆ  ಸಭೆಯಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ರಾಜ್ಯ ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ  ಪ್ರಶಸ್ತಿ ಪಡೆದ ಶಾಲಾ ಹಳೆ ವಿದ್ಯಾರ್ಥಿನಿ ಕುಮಾರಿ ಚೈತ್ರಾಂಜಲಿ ಇವಳಿಗೆ ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ. ಎ ಸ್ವಾಗತಿಸಿ , ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ,ಹಳೆವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರಗಿದವು. ಸದಾಶಿವ ಮಾಸ್ಟರ್ ಪೊಯ್ಯೆ ಕಾರ್ಯಕ್ರಮವನ್ನು ನಿರೂಪಿಸಿದರು.