15.8.19


                ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ





ಬಿ.ಪಿ,ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಧ್ವಜಾರೋಹಣ ಗೈದರು.ಬಳಿಕ ಸಭಾ ಕಾರ್ಯಕ್ರಮ ಜರಗಿತು.ವಾರ್ಡು ಸದಸ್ಯರು ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್, ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ , ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ, ಪಿ.ಟಿ.ಎ ಶ್ರೀ ಅಧ್ಯಕ್ಷರಾದ ಮೊಹಮ್ಮದಾಲಿ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ  ಪುಷ್ಪಲತಾ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ, ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲು ಗುತ್ತು,ರಕ್ಷಕರು ಹಾಗೂ ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
ವಾರ್ಡು ಸದಸ್ಯರು ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ  ಸ್ವಾತಂತ್ರ್ಯೋತ್ಸ ಹಾಗೂ ಅದರ ಮಹತ್ವದ ಕುರಿತು ತಿಳಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ವರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.ನಂದನ ಬಾಲಗೋಕುಲ ಸಮಿತಿ ಸುಖಶೈಲ ಪೆರ್ಮುದೆ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಸಿಹಿ ತಿಂಡಿ ನೀಡಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು.



 ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಹಿರೋಶಿಮಾ ನಾಗಸಾಕಿ ದಿನಾಚರಣೆ  ಜರುಗಿತು .ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ.ಕೆ ಯುದ್ಧದಿಂದ ಉಂಟಾಗುವ ಪರಿಣಾಮಗಳು, ಸಡಾಕೋ ಕೊಕ್ಕರೆಗಳು, ಅಣುಬಾಂಬ್ ಗಳ ಕುರಿತು, ವಿಚಾರಗಳನ್ನು ತಿಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರೋಶಿಮಾ ನಾಗಸಾಕಿಯಲ್ಲಿ ಉಂಟಾದ ಅಣುಬಾಂಬ್ ದಾಳಿಯ ಹಾಗೂ ಅದರಿಂದ ಉಂಟಾದ ಪರಿಣಾಮಗಳ  ದೃಶ್ಯಗಳನ್ನು ಪ್ರದರ್ಶಿಸಿ ವಿಜ್ಞಾನ ಸಂಘದ ಕಾರ್ಯದರ್ಶಿ ಅಧ್ಯಾಪಕರಾದ ಜಯಪ್ರಸಾದ್ ವಿವರಿಸಿದರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.