23.3.22



 


ರಕ್ಷಕ‌ ಶಿಕ್ಷಕ ಸಭೆ ಹಾಗೂ ಎಲ್. ಎಸ್.ಎಸ್. ಪರೀಕ್ಷೆ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ




ಪೆರ್ಮುದೆ: ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ರಕ್ಷಕ‌ ಶಿಕ್ಷಕ ಸಭೆ ಹಾಗೂ ಎಲ್. ಎಸ್.ಎಸ್. ಪರೀಕ್ಷೆ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಹಮ್ಮದಾಲಿ ವಹಿಸಿದರು. ವಾರ್ಡ್ ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮಾಯಿಲ್, ಮಾಜಿ ವಾರ್ಡ್ ಸದಸ್ಯರಾದ ಶ್ರೀ ಎಂ.ಕೆ . ಅಮೀರ್, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಚೇತನ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ, ಎಲ್. ಎಸ್.ಎಸ್. ಪರೀಕ್ಷೆ ವಿಜೇತರಾದ ಕುಮಾರಿ ಅಫ್ಲಾಹ .ಪಿ.ಎ, ಕುಮಾರಿ ಲಾವಣ್ಯ ರೈ , ಎಸ್.ಎಸ್.ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ಸರ್ ಎಂಬಿವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಶಾಲಾ ಶೈಕ್ಷಣಿಕ ವಿಚಾರಗಳನ್ನು ತಿಳಿಸಿ ಎಲ್. ಎಸ್.ಎಸ್. ಪರೀಕ್ಷೆ ವಿಜೇತರಿಗೆ ಅಭಿನಂದಿಸಿದರು.ವಾರ್ಡ್ ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮಾಯಿಲ್, ಮಾಜಿ ವಾರ್ಡ್ ಸದಸ್ಯರಾದ ಶ್ರೀ ಎಂ.ಕೆ . ಅಮೀರ್ ಎಲ್. ಎಸ್.ಎಸ್. ಪರೀಕ್ಷೆ ವಿಜೇತರಿಗೆ ಶಾಲು ಹೊದಿಸಿ ಅಭಿನಂದಿಸಿ ಶುಭಹಾರೈಸಿದರು.ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಹಮ್ಮದಾಲಿ ,ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಚೇತನ ಎಲ್ .ಎಸ್.ಎಸ್. ಪರೀಕ್ಷೆ ವಿಜೇತರಿಗೆ ಪ್ರಶಸ್ತಿ ಫಲಕ ನೀಡಿ ಅಭಿನಂದಿಸಿದರು.ಎಸ್.ಎಸ್.ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ಸರ್  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ   ಎಲ್ .ಎಸ್.ಎಸ್. ಪರೀಕ್ಷೆ ವಿಜೇತರಿಗೆ ಅಭಿನಂದಿಸಿದರು. 
ಅಧ್ಯಾಪಕರಾದ ಜಯಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಮಿತಾ ಟೀಚರ್ ಸ್ವಾಗತಿಸಿ ಸ್ವಾತಿ ಟೀಚರ್ ವಂದಿಸಿದರು.


 

18.3.22

ಬಿ.ಪಿ .ಪಿ.ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ

 ಹಾಗೂ ಸಂರಕ್ಷಣೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ



        ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು ಇದರ ವತಿಯಿಂದ

ಬಿ.ಪಿ.ಪಿ.ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ 

ಹಾಗೂಸಂರಕ್ಷಣೆ ಇದರ ಕುರಿತಾಗಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲಾಯಿತು

ಕೆನರಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆಯ ಸಂಯೋಜಕರಾದ ಶ್ರೀ ರವಿ ಕ್ರಾಸ್ತ

ಇವರುವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಸಂಸ್ಥೆ

ನಡೆಸಿದ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯ ಸಂಚಾಲಕರಾದ

ಶ್ರೀಮತಿ ಸವಿತಾ ಹಾಗೂ ಶ್ರೀ ಪೀಟರ್ ಸಹಕರಿಸಿದರು.

    ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸದಾಶಿವ ಕೆ.ಕೆ., ಪಿ.ಟಿ.. ಅಧ್ಯಕ್ಷರಾದ

 ಮಹಮ್ಮದಾಲಿ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಶಾಲಾ

ಮುಖ್ಯೋಪಾಧ್ಯಾಯರು ಶ್ರೀ ಸದಾಶಿವ ಕೆ.ಕೆ. ಸ್ವಾಗತಿಸಿ ಸ್ಮಿತಾ ಟೀಚರ್

ವಂದಿಸಿದರು.