15.8.22

 

ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ 

ಆಝಾಧೀ ಕಾ ಅಮೃತ ಮಹೋತ್ಸವ


    ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯು

ಬಹಳ ವಿಜೃಂಭಣೆಯಿಂದ ಜರಗಿತು. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಶಾಲಾ

ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್ ನೆರವೇರಿಸಿದರು. ವಾರ್ಡು ಸದಸ್ಯೆ ಶ್ರೀಮತಿ ಇರ್ಷಾನ

ಇಸ್ಮಾಯಿಲ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಲಿತ ಟೀಚರ್ ,ಶಾಲಾ ರಕ್ಷಕ ಶಿಕ್ಷಕ

ಅಧ್ಯಕ್ಷರಾದ ಶ್ರೀ ವಿಠಲ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಚೇತನ , ಮುಖ್ಯೋಪಾಧ್ಯಾಯರಾದ ಶ್ರೀ

ಸದಾಶಿವ.ಕೆ.ಕೆ, ಉಪಸ್ಥಿತರಿದ್ದರು. ತದನಂತರ ಮಕ್ಕಳಿಂದ ವಿವಿಧ ಡ್ರಿಲ್,ಸಾಂಸ್ಕೃತಿಕ ಕಾರ್ಯಕ್ರಮಗಳು

ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ

ಬಹುಮಾನಗಳನ್ನು ವಿತರಿಸಲಾಯಿತು. ಪೆರ್ಮುದೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ಊರ

ಸಂಘ ಸಂಸ್ಥೆಗಳು, ರಕ್ಷಕರು , ಅಧ್ಯಾಪಕ ವೃಂದ ಸಹಕರಿಸಿದರು.