ವಿಶ್ವ ಮಾದಕ ವಸ್ತು ದಿನಾಚರಣೆ
ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ
ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಜರಗಿತು. ಶಾಲಾ ಅಸೆಂಬ್ಲಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಮಾದಕ ವಸ್ತು ದಿನಾಚರಣೆ ಪ್ರಾಮುಖ್ಯತೆ ಕುರಿತು ತಿಳಿಸಿದರು . ಅಧ್ಯಾಪಕರಾದ ಜಯಪ್ರಸಾದ್ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರತಿಜ್ಞೆ ಹೇಳಿಕೊಟ್ಟರು .ವಿಜ್ಞಾನ ಸಂಘ ನೇತೃತ್ವದಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಾದ ವಿಡಿಯೋ ಹಾಗೂ ಚಿತ್ರ ಪ್ರದರ್ಶನ ಜರಗಿತು. ಮಕ್ಕಳಿಗೆ ಪೋಸ್ಟರ್ ರಚಿಸುವ ಚಟುವಟಿಕೆಯು ನಡೆಯಿತು. ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.