ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪರಿಸರ ಸಂಘದ
ನೇತೃತ್ವದಲ್ಲಿ ಜರಗಿತು.ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಪರಿಸರ
ದಿನಾಚರಣೆಗೆ ಚಾಲನೆ ನೀಡಲಾಯಿತು. ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ
ಪರಿಸರದಿನಾಚರಣೆಯ ಮಹತ್ವದ ಕುರಿತು ತಿಳಿಸಿದರು. ವಿದ್ಯಾರ್ಥಿಗಳಿಗೆ ಚಿತ್ರ ರಚನೆ,
ಪೋಸ್ಟರ್ ತಯಾರಿ, ಎಂಬಿತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು.ಅಧ್ಯಾಪಕ
ವೃಂದ ವಿದ್ಯಾರ್ಥಿಗಳು ಸೇರಿಶಾಲಾ ವಠಾರವನ್ನು ಶುಚಿಗೊಳಿಸಿದರು. ಪರಿಸರ ಸಂಘದ
ಸಂಚಾಲಕರಾದ ಜಯಪ್ರಸಾದ್ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದರು. ಶಾಲಾ
ಅಧ್ಯಾಪಕ ವೃಂದ ಸಹಕರಿಸಿದರು.