1.6.15


















ನೂತನ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ವರ್ಣರಂಜಿತ ಮೆರವಣಿಗೆಯೊಂದಿಗೆ
ಮಂಜೇಶ್ವರ ಉಪಜಿಲ್ಲಾ ಶಾಲಾ ಪ್ರವೇಶೋತ್ಸವ

ಪೆರ್ಮುದೆ : 2015-16 ನೇ ಅಧ್ಯಯನ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವವು ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.ಶಾಲಾ ಪ್ರವೇಶೋತ್ಸವದ ಅಂಗವಾಗಿ ವರ್ಣರಂಜಿತ ಮರವಣಿಗೆ ಜರಗಿತು.ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್,MLA ಶ್ರೀ P.B ಅಬ್ದುಲ್ ರಝಾಕ್, ಮಂಜೇಶ್ವರ BRC BPO ಶ್ರೀ ವಿಜಯ ಕುಮಾರ್, ಎಂಬಿವರು ಉಪಸ್ಥಿತರಿದ್ದರು. MLA ಶ್ರೀ ಅಬ್ದುಲ್ ರಝಾಕ್ ರವರು ನೂತನ ಶಾಲಾ ಕಟ್ಟದವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾರವರು ಸ್ವಾಗತಿಸಿದರು.ಮಂಜೇಶ್ವರ BRC BPO ಶ್ರೀ ವಿಜಯ ಕುಮಾರ್ ಶಾಲಾ ಪ್ರವೇಶೋತ್ಸವದ ಹಾಗೂ ಮಕ್ಕಳ ಹಕ್ಕುಗಳ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಮಣಿಕಂಠ ರೈ ವಹಿಸಿದರು. MLA ಶ್ರೀ P.B ಅಬ್ದುಲ್ ರಝಾಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾರ್ಡ ಸದಸ್ಯೆ ಶ್ರೀಮತಿ ತೆರೆಸಾ ಡಿ'ಸೋಜ,ನಿವೃತ್ತ ಮುಖ್ಯೋಪಾಧ್ಯಾಯರಾದ ಜನಾರ್ಧನ ಕುಂಡೇರಿ ಎಂಬಿವರು ಶುಭಾಶಂಸನೆ ಗೈದರು.ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್, PTA ಅಧ್ಯಕ್ಷರಾದ ಶ್ರೀ ರಾಮ ಪ್ರಕಾಶ್, ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಸಹಾಯಕ ವ್ಯವಸ್ಥಾಪಕರಾದ ಶ್ರೀ ಉಮೇಶ್ ಶೆಟ್ಟಿ, ಶ್ರೀ ವಿಜಯ ಕುಮಾರ್ ಪೆರ್ಮುದೆ, ಎಂಬಿವರು ಉಪಸ್ಥಿತರಿದ್ದರು. ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಸಹಾಯಕ ವ್ಯವಸ್ಥಾಪಕರಾದ ಶ್ರೀ ಉಮೇಶ್ ಶೆಟ್ಟಿ, ಹೊಸತಾಗಿ ಒಂದನೇ ತರಗತಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಶ್ರೀ ವಿಜಯ ಕುಮಾರ್ ಪೆರ್ಮುದೆ ಕಲಿಕೋಪಕರಣಗಳನ್ನು ವಿತರಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮವನ್ನು ಕುಮಾರಿ. ಲಲಿತಾಂಜಲಿಯವರು ನಿರೂಪಿಸಿದರು. ಅಧ್ಯಾಪಕರಾದ ಸದಾಶಿವ.ಕೆ.ಕೆ ವಂದಿಸಿದರು.

1 comment: