16.7.16




 "ತುಳು ನಿನಾದ" ದ್ವಿದಿನ  ಕಲಿಕಾ ಶಿಬಿರ


ಪೆರ್ಮುದೆ: ಮನೆಯಲ್ಲಿ ತುಳು ಭಾಷೆ ಮಾತನಾಡುವ ವಿದ್ಯಾರ್ಥಿಗಳಿಗೆ ತುಳು ಭಾಷೆಯ ಪದ, ವಾಕ್ಯಗಳನ್ನು ಕನ್ನಡ ಭಾಷೆಯಲ್ಲಿ ತಿಳಿಸುವ ಉದ್ಧೇಶದಿಂದ  ಎಸ್.ಎಸ್. ಕಾಸರಗೋಡು ಹಾಗೂ ಮಂಜೇಶ್ವರ  ಬಿ.ಆರ್.ಸಿ ವತಿಯಿಂದ     ಬಿ.ಪಿ,ಪಿ..ಎಲ್.ಪಿ..ಶಾಲೆ.ಪೆರ್ಮುದೆಯಲ್ಲಿ "ತುಳು ನಿನಾದ" ದ್ವಿದಿನ ಕಲಿಕಾ ಶಿಬಿರ ಏರ್ಪಡಿಸಲಾಯಿತು. ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್, ಜಿಲ್ಲಾ ಯೋಜನಾ ಅಧಿಕಾರಿ ಯಸ್.ಯಸ್ ಕಾಸಸರಗೋಡು ಶ್ರೀ ಇಬ್ರಾಹಿಂ ,ಮಂಜೇಶ್ವರ ಬಿ.ಆರ್.ಸಿ, ಬಿ.ಪಿ.ಶ್ರೀಮತಿ ರೋಜ, ವಾರ್ಡ ಸದಸ್ಯರು,ಹಾಗೂ welfare standing commitee chairman ಶ್ರೀ ಯಂ.ಕೆ ಅಮೀರ್, ಪಿ.ಟಿ. ಅಧ್ಯಕ್ಷ ಶ್ರೀ ಮೊಹಮ್ಮದ್ ಅಲಿ, ಎಂ.ಪಿ.ಟಿ. ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ , ಹಿರಿಯ ನಾಟಕ ಕಲಾವಿದ ಶ್ರೀ ಉಮೇಶ್, ಎಂಬಿವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ. ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸದಾಶಿವ.ಕೆ.ಕೆ ಕಾರ್ಯಕ್ರಮವನ್ನು ನಿರೋಪಿಸಿದರು. ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸದಾಶಿವ.ಕೆ.ಕೆ, ಶ್ರೀ ವಿಜಯ ಕುಮಾರ್ ಶಿಬಿರದ ಕಾರ್ಯಕಲಾಪಗಳಿಗೆ ನೇತೃತ್ವ ವಹಿಸಿದರು.



ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು





















No comments:

Post a Comment