ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಣೆ
ಪೆರ್ಮುದೆ : ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಓಣಂ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಪೂವಲಿ ಸ್ಪರ್ಧೆ ಜರಗಿತು. ವಿದ್ಯಾರ್ಥಿಗಳಿಗಾಗಿ ಸಂಗೀತ ಕುರ್ಚಿ, ಮಡಕೆ ಒಡೆಯುವುದು, ಬಲೂನ್ ಒಡೆಯುವುದು, ಕಪ್ಪಿಗೆ ನೀರು ತುಂಬಿಸುವುದು, ಹಗ್ಗ ಜಗ್ಗಾಟ ಸ್ಪರ್ದೆಗಳು ಜರಗಿತು. ರಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಮಡಕೆ ಒಡೆಯುವುದು, ಲಿಂಬೆ ಚಮಚ ಓಟ, ಸ್ಪರ್ದೆಗಳು ಜರಗಿತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ಓಣಂ ಹಬ್ಬದ ಪ್ರಯುಕ್ತ ಓಣಂ ಸಹಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ರಕ್ಷಕು, ಸಾರ್ವಜನಿಕರು, ಅಧ್ಯಾಪಕರು ಓಣಂ ಸಹಭೋಜನದಲ್ಲಿ ಪಾಲ್ಗೊಂಡರು.
No comments:
Post a Comment