ಪೆರ್ಮುದೆ ಶಾಲೆ ಭೀಮಾ ಸ್ಕೂಲ್
ಭಾರತೀಯ
ಜೀವ ವಿಮಾ ನಿಗಮದ 'ಭೀಮಾ
ಸ್ಕೂಲ್ ' ಯೋಜನೆಗೆ
ಅರ್ಹವಾದ ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಗೆ ನಿಗಮದ ವತಿಯಿಂದ
ರೂ 7500/- ಚೆಕ್
ಅನ್ನು ವಿತರಿಸಲಾಯಿತು.
ಇದಕ್ಕಾಗಿ ಶಾಲೆಯಲ್ಲಿ
ಏರ್ಪಡಿಸಿದ ಸಭೆಯ ಅಧ್ಯಕ್ಷತೆಯನ್ನು
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶಾರದಾ.ಎ
ಅವರು ವಹಿಸಿದರು.
ನಿಗಮದ ಹಿರಿಯ
ಪ್ರಭಂದಕ ನಾರಾಯಣನ್ ಅವರು ಚೆಕ್
ಅನ್ನು ನೀಡಿ ಶುಭ ಹಾರೈಸಿದರು.
ನಿಗಮದ ಮಂಜೇಶ್ವರದ
ಶಾಖಾ ಪ್ರಭಂದಕರಾದ ವಾಸುದೇವನ್
ಅವರು ಶಾಲೆಗೂ ಹಾಗೂ ಆಯ್ದ 10
ವಿದ್ಯಾರ್ಥಿಗಳಿಗೆ
ಸ್ಮರಣಿಕೆ ಗಳನ್ನು ನೀಡಿದರು.ಸಭೆಯಲ್ಲಿ
ಶಾಲಾ ಪಿ.ಟಿ.ಎ
ಅಧ್ಯಕ್ಷ ಶ್ರಿ ಮೊಹಮ್ಮದ್ ಅಲಿ
, ಎಂ.ಪಿ.ಟಿ.ಎ
ಅಧ್ಯಕ್ಷೆ ಹಾಗೂ ನಿಗಮದ ಪ್ರತಿನಿದಿ
ಶ್ರೀಮತಿ ದಿವ್ಯ ಭಾರತಿಯವರು
ಉಪಸ್ಥಿತರಿದ್ದರು.
ನಿಗಮದ ಅಭಿವೃದ್ಧಿ
ಅಧಿಕಾರಿ ಪ್ರಸಾದ್ ಎಂ.ಎನ್
ಸ್ವಾಗತಿಸಿ ಶಾಲಾ ಅಧ್ಯಾಪಕ
ಅಬ್ದುಲ್ ಮುನೀರ್ ವಂದಿಸಿದರು.
ಅಧ್ಯಾಪಕ ಸದಾಶಿವ.ಕೆ.ಕೆ
ಕಾರ್ಯಕ್ರಮ ನಿರೂಪಿಸಿದರು.
No comments:
Post a Comment