ಬಾಡೂರು
ಪೆರ್ಮುದೆ ಪರಮೇಶ್ವರಿ ಎ.ಎಲ್.ಪಿ ಶಾಲೆ ಪೆರ್ಮುದೆ
ಹರಿತ
ಕೇರಳ ಮಿಶನ್ 2016
ಹರಿತ ಕೇರಳ ಮಿಶನ್ 2016 ಈ ಯೋಜನೆಯ ಅಂಗವಾಗಿ ದಿನಾಂಕ 08-12-2016 ನೇ ಗುರುವಾರದಂದು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿದವು. ಬೆಳಗ್ಗೆ10 ಗಂಟೆಗೆ ಸರಿಯಾಗಿ ಶಾಲಾ ಅಸೆಂಬ್ಲಿ ಜರಗಿತು.ಶಾಲಾ ಮುಖ್ಯಪಾಧ್ಯಾಯಿನಿ ಶ್ರೀಮತಿ ಶಾರದ.ಎ ಎಲ್ಲರನ್ನು ಸ್ವಾಗತಿಸಿದರು.ಪೈವಳಿಕೆ ಪಂಚಾಯತ್ ಸದಸ್ಯರೂ , ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ. ಅಮೀರ್ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿ ಪರಿಸರ ಮಾಲಿನ್ಯದ ತೊಂದರೆಗಳು ಮತ್ತು ಅವುಗಳನ್ನು ತಡೆಗಟ್ಟುವುದರ ಮಹತ್ವದ ಕುರಿತು ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಲಿ, ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಶಾಲಾ ಅಸೆಂಬ್ಲಿ ಯಲ್ಲಿ ‘ಹರಿತ ಕೇರಳ ಪ್ರತಿಜ್ಞೆಯನ್ನು ಮಕ್ಕಳಿಗೆ ಹೇಳಿಕೊಡಲಾಯಿತು.
ಸ್ವಸಹಾಯ ಸಂಘಗಳ ಸದಸ್ಯರು, ರಕ್ಷಕರು, ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿ ಘೋಷಣಾ ವಾಕ್ಯಗಳೊಂದಿಗೆ ಶಾಲೆಯಿಂದ ಪೆರ್ಮುದೆ ಪೇಟೆಯ ತನಕ ಮೆರವಣಿಗೆ ನಡೆಸಲಾಯಿತು
ಪೆರ್ಮುದೆ ಪೇಟೆಯಲ್ಲಿ ಪರಿಸರ ಮಾಲಿನ್ಯದಿಂದಾಗುವ ಅನಾಹುತಗಳು ಮತ್ತು ಅವುಗಳನ್ನು ತಡೆಗಟ್ಟುವುದರ ಮಹತ್ವದ ಕುರಿತು ತಿಳಿಸಲಾಯಿತು.
ಅಂಗಡಿ ಮಾಲಕರಿಗೆ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟು ಪೋಸ್ಟರ್ ಗಳನ್ನು ನೀಡಲಾಯಿತು.
ರಕ್ಷಕರು , ಸ್ವಸಹಾಯ ಸಂಘಗಳ ಸದಸ್ಯರು , ಮಕ್ಕಳು ಮತ್ತು ಅಧ್ಯಾಪಕರು ಸೇರಿ ಶಾಲಾ ಪರಿಸರ ,ಸುತ್ತಮುತ್ತಲು ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಒಟ್ಟುಗೂಡಿಸಿ
ಪಂಚಾಯತ್ ವತಿಯಿಂದ ಅದನ್ನು ಸ್ಥಳಾಂತರಿಸಲಾಯಿತು. ಆಗಮಿಸಿದ ಎಲ್ಲರಿಗೂ ಲಘಉಪಹಾರ ವಿತರಿಸಲಾಯಿತು
No comments:
Post a Comment