19.6.17


ವಾಚನಾ ವಾರ .....



ವಾಚನಾ ವಾರ- ಪಿ.ಎನ್. ಪಣಿಕ್ಕರ್ ಚರಮದಿನ

ಶ್ರೀಯುತ ಪಿ.ಎನ್.ಪಣಿಕ್ಕರ್ 1909 ಮಾರ್ಚ್ 1 ರಂದು ಗೋವಿಂದ ಪಿಳ್ಳೆ ಮತ್ತು ಜಾನಕಿ ಅಮ್ಮ ರವರ ಪುತ್ರನಾಗಿ ಕೇರಳದ ಕೋಟ್ಟಾಯಂ ಜಿಲ್ಲೆಯ ನೀಲಂಪೇರೂರುನಲ್ಲಿ ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಅವರು ತನ್ನ ಬಾಲ್ಯ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಅನುಭವಿಸಿದ ಪುಸ್ತಕಗಳ ಕೊರತೆ ಮುಂದಿನ ಸಮಾಜಕ್ಕೆ ಉಂಟಾಗ ಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಸನಾತನ ಧರ್ಮಂ ಲೈಬ್ರೆರಿಯನ್ನು ತನ್ನ ಹುಟ್ಟೂರಲ್ಲಿ 1926ರಲ್ಲಿ ಆರಂಭಿಸಿದರು. 
ಶ್ರೀಯುತ ಪಣಿಕ್ಕರ್ ರವರು 1945 ರಲ್ಲಿ ತಿರುವಿತಾಂಕೂರು ಗ್ರಂಥಶಾಲಾ ಸಂಘಂ 
( Travancore Library Association)ಸ್ಥಾಪಿಸಿ 47 ಗ್ರಾಮೀಣ ಲೈಬ್ರೆರಿಗಳನ್ನು ಸ್ಥಾಪಿದರು. ಈ ಸಂಘದ ಘೋಷಣಾ ವಾಕ್ಯವೇ "ಓದಿರಿ ಮತ್ತು ಬೆಳೆಯಿರಿ" ಎಂಬುದಾಗಿತ್ತು. 1956ರಲ್ಲಿ ಕೇರಳ ರಾಜ್ಯದ ಉದಯವಾದಾಗ ಇದು ಕೇರಳ ಗ್ರಂಥಶಾಲಾ ಸಂಘವಾಗಿ ಗರೂಪೀಕರಣಗೊಂಡಿತು.
. ಶ್ರೀಯುತ ಪಿ.ಎನ್ ಪಣಿಕ್ಕರ್ ಓದುವಿಕೆಯ ಅಗತ್ಯ ಮತ್ತು ಗ್ರಂಥಾಲಯ ಗಳ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಾ ಕೇರಳ ರಾಜ್ಯದ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಜನರನ್ನು ಒಟ್ಟುಗೂಡಿಸಿ ಅಲ್ಲಲ್ಲಿ ಲೈಬ್ರೆರಿ ಸ್ಥಾಪಿಸಲು ಪ್ರೇರಣೆ ನೀಡಿದರು. ಇದರಿಂದ ಪ್ರೇರೇಪಿತರಾಗಿ ಸಾಧಾರಣ 6000 ಲೈಬ್ರೆರಿಗಳು ಈ ಶೃಂಖಲೆಯಲ್ಲಿ ಸೇರಿದವು.
1975ರಲ್ಲಿ ಯುನೆಸ್ಕೋ (UNESCO) ಸಂಸ್ಥೆಯಿಂದ ಕೇರಳ ಗ್ರಂಥಶಾಲಾ ಸಂಘಕ್ಕೆ ಕೃಪಾಸಖಾಯ ಅವಾರ್ಡ್ ಲಭಿಸಿತು. ಶ್ರೀಯುತ ಪಿ.ಎನ್. ಪಣಿಕ್ಕರ್ ರವರು .1977ರ ತನಕ ಸುಧೀರ್ಘ 32 ವರ್ಷಗಳ ಕಾಲ ಗ್ರಂಥಶಾಲಾ ಸಂಘದ ಪ್ರಧಾನ
ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1977ರಲ್ಲಿ ಈ ಗ್ರಂಥಶಾಲಾ ಸಂಘವು ಕೇರಳ ಸರಕಾರದ ಆಧೀನಕ್ಕೆ ಸೇರಿತು. ನಂತರ ಈ ಸಂಘವನ್ನು ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ( Kerala State Library Coucil)ಎಂದು ಹೆಸರಿಸಿ ಪ್ರಜಾಪ್ರಭುತ್ವ ಚೌಕಟ್ಟು ನೀಡಿ ಹಣಕಾಸು ನೆರವು ನೀಡಲಾರಂಬಿಸಿತು.
1977ರಲ್ಲಿ ಅವರು ಕೇರಳ ಎಸೋಸಿಯೇಶನ್ ಫೋರ್ ನೋನ್ ಫಾರ್ಮಲ್ ಎಜುಕೇಶನ್ ಎಂಡ್ ಡೆವೆಲಪ್ ಮೆಂಟ್ ( ) ಸ್ಥಾಪಿಸಿದರು. ಇದು ಕೇರಳ ಸಾಕ್ಷರತಾ ಮಿಷನ್ ಆರಂಭಕ್ಕೆ ನಾಂದಿ ಹಾಡಿತು.
ಪಿ.ಎನ್ ಪಣಿಕ್ಕರ್ ರವರು 1995 ಜೂನ್ 19ರಂದು ಅವರ 86 ನೇ ವಯಸ್ಸಿನಲ್ಲಿ ವಿಧಿವಶರಾದರು. ಅವರ ಗೌರವಾರ್ಥ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ಸ್ಮರಣೆಗಾಗಿ ಕೇರಳ ಸರಕಾರ ಪ್ರತೀ ವರ್ಷ ಜೂನ್ 19ರಂದು ಎಲ್ಲಾ ಶಾಲೆ,ಕಾಲೇಜು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನಾ ದಿನ ( Reading Day)ವಾಗಿಯೂ ಅಂದಿನಿಂದ ಒಂದು ವಾರದ ತನಕ ವಾಚನಾ ಸಪ್ತಾಹ ಆಚರಿಸುತ್ತಾ ಮಕ್ಕಳಲ್ಲೂ ಸಾರ್ವಜನಿಕರಲ್ಲೂ ಓದಿನ ಮಹತ್ವವನ್ನು ನೆನಪಿಸಿ ಸಾಹಿತ್ಯ ಲೋಕದೆಡೆಗೆ ಆಕರ್ಷಿಸುವ ಪ್ರಯತ್ನ ನಡೆಸಲು ಪ್ರೋತ್ಸಾಹಿಸುತ್ತದೆ.
ಬನ್ನಿ ಗೆಳೆಯರೇ ಮುಂದಿನ ಪೀಳಿಗೆಯಲ್ಲಿ ಓದಿನ ಅಗತ್ಯವನ್ನು ಒತ್ತಿ ಹೇಳಲು ನಾವೂ ವಾಚನಾ ದಿನ/ ವಾರವನ್ನು ವೈವಿಧ್ಯಮಯವಾಗಿ ಆಚರಿಸೋಣವೇ



5.6.17



ಪೆರ್ಮುದೆ ಶಾಲೆಯಲ್ಲಿ  ವಿಶ್ವ ಪರಿಸರದಿನಾಚರಣೆ

ವಿಶ್ವ ಪರಿಸರ ದಿನದ ಅಂಗವಾಗಿ ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಪರಿಸರದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಶಾರದ.ಎ ಉದ್ಘಾಟಿಸಿದರು.ಸದಾಶಿವ ಮಾಸ್ಟರ್ ಪೊಯ್ಯೆ ಪರಿಸರ ದಿನದ ಪ್ರಾಧಾನ್ಯತೆಯ ಕುರಿತು ತಿಳಿಸಿದರು.

  
ಪೆರ್ಮುದೆ ಶಾಲೆ ಸ್ಮಾರ್ಟ ಸ್ಕೂಲ್



                                 
ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಒಂದು ತರಗತಿಯನ್ನು ಅತ್ಯಾಧುನಿಕ ತರಗತಿಯನ್ನಾಗಿಸಲು ಪ್ರೋಜೆಕ್ಟರ್ ಒಂದನ್ನು ಶಾಲಾ ಹಳೆವಿದ್ಯಾರ್ಥಿ ಕೊಯಂಗಾನ ಕೃಷ್ಣ ಭಟ್ ರವರು ಉದಾರವಾಗಿ ನೀಡಿದರು. ಕಾರ್ಯಕ್ರಮವನ್ನು ಶ್ರೀ ಕೊಯಂಗಾನ ಕೃಷ್ಣ ಭಟ್  ಪ್ರೋಜೆಕ್ಟರ್ ಆನ್ ಮಾಡುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತಮ ಸಾಧನೆಗೈಯಿರಿ ಎಂದು ಹಾರೈಸಿದರು. ಶಾಲಾ ಪ್ರಭಂಧಕರು ಶ್ರೀ ಇ.ರವಿಶಂಕರ ಭಟ್ , ಮುಖ್ಯೋಪಾದ್ಯಾಯಿನಿ ಶ್ರೀಮತಿ ಶಾರದ.ಎ , ಡಾI ಕೇಶವ ಭಟ್ ಎಡಕ್ಕಾನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಪಿ.ಟಿ.ಎ ಅಧ್ಯಕ್ಷ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಭಾರತಿ, ಪ್ರೀ ಪೈಮರಿ ಅಧ್ಯಕ್ಷ ಶ್ರೀ ಸತೀಶ್ ರೈ ಕುಡಾಲು ಗುತ್ತು , ನಿವೃತ್ತ ಮುಖ್ಯೋಪಾದ್ಯಾಯರು ಶ್ರೀ ಖಾದರ್ ಮಾಸ್ಟರ್, ಪ್ರೋಜೆಕ್ಟರ್ ನಿರ್ವಾಹಕ ಶ್ರೀ ಸುಜೇಶ್, ಎಂಬಿವರು ಉಪಸ್ಥಿತರಿದ್ದರು. ಶಾಲಾ ಅದ್ಯಾಪಕಾದ ಸದಾಶಿವ ಮಾಸ್ಟರ್ ಪೊಯ್ಯೆ ಕಾರ್ಯಕ್ರಮ ನಿರೂಪಿಸಿದರು.ಸ್ಮಿತಾ ಟೀಚರ್ ವಂದಿಸಿದರು.









4.6.17



ಸಂಯುಕ್ತ ರಾಷ್ಟ್ರಗಳ ಸಾರ್ವತ್ರಿಕ ಸಭೆಯಿಂದ (United Nations General Assembly) ೧೯೭೨1972 ರ ಇಸವಿಯಿಂದ ಪ್ರಾರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ್ರ ೫ ಜೂನ್ ದಿನಾಂಕದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ . ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮದ ವಿಶ್ವ ಪರಿಸರ ದಿನವು ಪ್ರತಿ ವರ್ಷವೂ ಅನ್ಯ ದೇಶಗಳ ನಗರದಲ್ಲಿ ಜೂನ್ ೫ ದಿನಾಂಕದ ವಾರದಲ್ಲಿ ಆಚರಿಸಲಾಗುತ್ತದೆ. ಆಚರಣೆಯಲ್ಲಿ ಪರಿಸರದ ಬಗ್ಗೆ ಸಮಾಜಗಳಲ್ಲಿ ಅರಿವು ಮೂಡಿಸುತ್ತದೆ. ಈ ಆಚರಣೆ ಪರಿಸರದ ಕುರಿತಾಗಿ ವಿಶ್ವ ಜಾಗೃತಿ ಮೂಡಿಸುವ ಕಾರ್ಯವಾಗಿದೆ. ೨೦೦೫ನೇ ಇಸವಿಯ ವಿಶ್ವ ಪರಿಸರ ದಿನವು ಸ್ಯಾನ್ ಫ್ರೆಂಸಿಸ್ಕೋನಗರದಲ್ಲಿ ಜೂನ್ ೧ - ೫ ರವರೆಗೆ ಆಚರಿಸಲಾಗುತ್ತಿದೆ.


Permude School Smart Class Room...



1.6.17

2017-18  ಶಾಲಾ ಪ್ರವೇಶೋತ್ಸವ

ಬಿ.ಪಿ.ಪಿ..ಎಲ್.ಪಿ.ಶಾಲೆ ಪೆರ್ಮುದೆ ಇಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಜರಗಿತು. ವರ್ಣರಂಜಿತ ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀಯುತ ಎಂ.ಕೆ.ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಾರದಾ.ಎ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್, ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಮೊಹಮ್ಮದಾಲಿ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ಶತೀಶ್ ರೈ ಕುಡಾಲು ಗುತ್ತು, ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕಲಿಕೋಪಕರಗಳನ್ನು ವಿತರಿಸಲಾಯಿತು.ಅಧ್ಯಾಪಿಕೆ ಸ್ಮಿತಾ ಟೀಚರ್ ಪ್ರವೇಶೋತ್ಸವ ಗೀತೆ ಹಾಡಿದರು. ಸದಾಶಿವ ಮಾಸ್ಚರ್ ಪೊಯ್ಯೆ ಸ್ವಾಗತಿಸಿ ಅಬ್ದುಲ್ ಮುನೀರ್ ವಂದಿಸಿದರು.  

Inaugurated By Ward member & Paivalike Gram Panchayath welfare committee chairman
Sri M .K Ameer 



ಪ್ರವೇಶೋತ್ಸವ ಮೆರವಣಿಗೆ






















ಕಲಿಕೋಪಕರಣ ವಿತರಣೆ....







ಧನ್ಯವಾದ ಅಬ್ದುಲ್ ಮುನೀರ್


ಅಕ್ಷರಾಭ್ಯಾಸ ಪ್ರಾರಂಭ