2.6.19


ಪೈವಳಿಕೆ ಪಂಚಾಯತ್ ಮಟ್ಟ ಹಾಗೂ ಮಂಜೇಶ್ವರ ಉಪಜಿಲ್ಲಾ ಮಟ್ಟದ 
ಪ್ರವೇಶೋತ್ಸವ ಸ್ವಾಗತ ಸಮಿತಿ ರಚನೆ ಸಭೆ
















ಪೆರ್ಮುದೆ : ಪೈವಳಿಕೆ ಪಂಚಾಯತ್ ಮಟ್ಟ ಹಾಗೂ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರವೇಶೋತ್ಸವ ಸ್ವಾಗತ ಸಮಿತಿ ರಚನೆ ಸಭೆಯು ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಜರಗಿತು. ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ , ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಎಂ.ಕೆ ಅಮೀರ್,ಮಂಜೇಶ್ವರ ಬಿ.ಆರ್.ಸಿ ಬಿ ಪಿ ಒ ಶ್ರೀ ವಿಜಯ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಶಾರದ., ಶ್ರೀಮತಿ ಲಲಿತ, ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ ಪಿ.ಟಿಎ ಅಧ್ಯಕ್ಷ ಶ್ರೀ ಸತೀಶ್ ರೈ ಕುಡಾಲುಗುತ್ತು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಉಪಸ್ಥಿತರಿದ್ದರು.
ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಎಂ.ಕೆ ಅಮೀರ್ ಅಧ್ಯಕ್ಷತೆ ವಹಿಸಿದರು.ಮಂಜೇಶ್ವರ ಬಿ.ಆರ್.ಸಿ ಬಿ ಪಿ ಒ ಶ್ರೀ ವಿಜಯ ಕುಮಾರ್ ಪ್ರವೇಶೋತ್ಸವದ ಕುರಿತು ತಿಳಿಸಿದರು.ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸದಾಶಿವ ಕೆ.ಕೆ ಕಾರ್ಯಕ್ರಮದ ಕುರಿತು ತಿಳಿಸಿದರು.ಬಳಿಕ ಸ್ವಾಗತ ಸಮಿತಿ ರಚಿಸಲಾಯಿತು.ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ, ಉಪಾಧ್ಯಕ್ಷರಾಗಿ ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಎಂ.ಕೆ ಅಮೀರ್, ಕನ್ವೀನರ್ ಆಗಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ , ಹಾಗೂ ಹತ್ತು ಮಂದಿ ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.ಕಾರ್ಯರ್ಕಮವನ್ನು ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತ ಡಯಾಸ್ ಸ್ವಾಗತಿಸಿ ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾರಾದ ಸದಾಶಿವ ಕೆ.ಕೆ ವಂದಿಸಿದರು.


No comments:

Post a Comment