ಎಸ್ ಎಸ್ ಕೆ ಕಾಸರಗೋಡು ಮತ್ತು ಬಿ ಆರ್ ಸಿ ಮಂಜೇಶ್ವರ ಇವರ ಸಹಯೋಗದೊಂದಿಗೆ ಆಯೋಜಿಸಲ್ಪಡುವ ಕಲಿಕೋತ್ಸವ ಕಾರ್ಯಕ್ರಮವು ಬಿ ಪಿ ಪಿ ಎ ಎಲ್ ಪಿ ಶಾಲೆ ಪೆರ್ಮುದೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ,ಎಸ್ ಎಸ್ ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ,ಶಾಲಾ ಪಿಟಿಎ ಅಧ್ಯಕ್ಷರಾದ ಅಶೋಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಸುನಿತ, ಪ್ರೀ ಪ್ರೈಮರಿ ಪಿಟಿಎ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಎಂಬಿವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ .ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಎಸ್ ಎಸ್ ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಿಕೋತ್ಸವ ಮಕ್ಕಳ ಕಲಿಕೆಯು ಪ್ರಗತಿಯನ್ನು ಬಿಂಬಿಸುವಂತಾಗಲಿ ಎಂದು ಹಾರೈಸಿದರು. ಅಲ್ಮಾಹಿರ್ ಅರಬಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಹನಾದ ಮೊಹಮ್ಮದ್ ನಜೀಬ್ ನ್ನು ಶಾಲಾ ಪಿಟಿಎ ಅಧ್ಯಕ್ಷರಾದ ಅಶೋಕ ಪ್ರಮಾಣ ಪತ್ರ ಹಾಗೂ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಿದರು.ಬಳಿಕ ಮಕ್ಕಳಿಂದ ವಿವಿಧ ಕಲಿಕೋತ್ಸವದ ಚಟುವಟಿಕೆಗಳ ಪ್ರದರ್ಶನ ಜರಗಿದವು.
ಶಾಲಾ ಅಧ್ಯಾಪಿಕೆ ಶ್ರೀಮತಿ ಸ್ವಾತಿ ಎಲ್ಲರನ್ನೂ ಸ್ವಾಗತಿಸಿದರು, ಶಾಲಾ ಅಧ್ಯಾಪಕರಾದ ಜಯಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.
No comments:
Post a Comment