28.7.15


















ಎಪಿಜೆ ಅಬ್ದುಲ್ ಕಲಾಂ. ಭಾರತದ ಮಾಜಿ ರಾಷ್ಟ್ರಪತಿ. ಸದಾ ಕ್ರಿಯಾಶೀಲ ವಿಜ್ಞಾನಿಯಾಗಿದ್ದ ಅಬ್ದುಲ್ ಕಲಾಂ ತಮ್ಮ ವೈಜ್ಞಾನಿಕ ಕೆಲಸ, ಚಿಂತನೆಗಳ ಮೂಲಕ ದೇಶಕ್ಕೇ ಮಾದರಿಯಾಗಿದ್ದಾರೆ. ಅಬ್ದುಲ್ ಕಲಾಂ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇ ಬೇಕಾದ 5 ಸತ್ಯಗಳು.

1. 1998
ರ ಭಾರತದ ಅಣು ಅಸ್ತ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಅಬ್ದುಲ್ ಕಲಾಂ. ಈ ಐತಿಹಾಸಿಕ ಸಾಧನೆಯಿಂದ ಏಕಾಏಕಿ ಪ್ರಸಿದ್ಧರಾದ ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂ.

2. ರಾಷ್ಟ್ರಪತಿ ಆಗುವುದಕ್ಕಿಂತ ಮುನ್ನ ಸರ್ಕಾರಿ ಸಂಸ್ಥೆಗಳಾದ ಡಿಆರ್ ಡಿಓ ಮತ್ತು ಇಸ್ರೋದಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಕಲಾಂ. ಅಲ್ಲಿ ಅತ್ಯಾಧುನಿಕ ಕ್ಷಿಪಣಿ ಮತ್ತು ಉಡ್ಡಯನ ವಾಹನವನ್ನ ಅಭಿವೃದ್ಧಿಪಡಿಸಿದ್ದರು. ಹೀಗಾಗಿಯೇ ಅಬ್ದುಲ್ ಕಲಾಂ `ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ.

3.
ಶಾಲಾ ದಿನಗಳಲ್ಲಿ ಅಬ್ದುಲ್ ಕಲಾಮ್ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ ಆಗಿರಲಿಲ್ಲ.

4.
ಶಾಲೆ ಮುಗಿದ ಬಳಿಕ ನ್ಯೂಸ್ ಪೇಪರ್ ಮಾರಾಟ ಮಾಡಿ ಬಂದ ಹಣವನ್ನ ತಂದೆಗೆ ನೀಡಿ ಅವರ ಖರ್ಚಿನ ಭಾರ ತಗ್ಗಿಸುತ್ತಿದ್ದ ಅಬ್ದುಲ್ ಕಲಾಂ.

5. 1998
ರಲ್ಲಿ ಹೃದಯ ತಜ್ಞ ಡಾ. ಸೋಮರಾಜು ಸಹಕಾರ ಪಡೆದು ಕಡಿಮೆ ಖರ್ಚಿನ ಕರೋನರಿ ಸ್ಟೆಂಟ್ (ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ನಿವಾರಣೆಗೆ ಬಳಸುವ ಉಪಕರಣ) ಅನ್ನ ಅಭಿವೃದ್ಧಿಪಡಿಸಿದ ಸಾಧನೆ ಅಬ್ದುಲ್ ಕಲಾಂ ಅವರದ್ದು, ಜೊತೆಗ, ಇಬ್ಬರೂ ಸೇರಿ ಆರೋಗ್ಯ ತಪಾಸಣೆ ನಡೆಸಬಲ್ಲ ಸುಲಭ ಸಾಧನವಾದ ಟ್ಯಾಬ್ಲೆಟ್ ಪಿಸಿಯನ್ನ ಅಭಿವೃದ್ಧಿಪಡಿಸಿದ್ದರು. ಈ ಟ್ಯಾಬ್ಲೆಟ್ ಗೆ ಕಲಾಮ್-ರಾಜು ಟ್ಯಾಬ್ಲೆಟ್ ಎಂದೇ ಹೆಸರು ನೀಡಲಾಗಿದೆ.

ಇಹ ಲೋಕ ತ್ಯಜಿಸಿ ನಮ್ಮೆಲ್ಲರನ್ನ ಅನಾಥರಾಗಿಸಿದ ಈ ಮಹಾನ್ ವ್ಯಕ್ತಿಗೆ ನಮ್ಮೆಲ್ಲರ ಶ್ರದ್ದಾಂಜಲಿಗಳು..............






22.7.15


ಜೂಲೈ 21 

ಚಾಂದ್ರ ದಿನ

ಚಾಂದ್ರ ದಿನದ ಕುರಿತು ತರಗತಿಗಳನ್ನು ನಡೆಸಲಾಯಿತು...



20.7.15

ತಿಂಗಳ ಕ್ಯಾಲೆಂಡರ್
ಜುಲಾಯಿ 2015
ತಿಂಗಳು
ದಿನಾಂಕ
ಚಟುವಟಿಕೆ
ಜವಾಬ್ದಾರಿ
ಮೇಲ್ನೋಟ













ಜುಲಾಯಿ 2015
01/07/15
ಶಾಲಾ ಮಂತ್ರಿಮಂಡಲ ಸಭೆ


ಅಧ್ಯಾಪಕರು
ಶಾಲಾ ನಾಯಕಿ
ಮುಖ್ಯೋಪಾಧ್ಯಾಯಿನಿ
ಅಧ್ಯಾಪಕರು
06/07/15
ಶಾಲೆಯಗೊಂದು ತರಕಾರಿ ತೋಟ ನಿರ್ಮಾಣ ಅಧ್ಯಾಪಕರು
ಆರೋಗ್ಯ ಮಂತ್ರಿ
ಮುಖ್ಯೋಪಾಧ್ಯಾಯಿನಿ
ಅಧ್ಯಾಪಕರು
10/07/15
ಎಸ್.ಆರ್.ಜಿ ಸಭೆ ಎಸ್.ಆರ್.ಜಿ ಕನ್ವೀನರ್ ಮುಖ್ಯೋಪಾಧ್ಯಾಯಿನಿ
10/07/15
ವಿಶ್ವ ಜನಸಂಖ್ಯಾ ದಿನದ ಕುರಿತಾದ ತರಗತಿ ತರಗತಿ ಅಧ್ಯಾಪಕರು ಅಧ್ಯಾಪಕರು
17/07/15
ವಿವಿಧ ಕ್ಲಬ್ ಗಳ ರೂಪೀಕರಣ
ಪಧಾಧಿಕಾರಿಗಳ ಆಯ್ಕೆ
ಕ್ಲಬ್ ಕನ್ವೀನರ್ ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
17/07/15
ಎಸ್.ಆರ್.ಜಿ ಸಭೆ ಎಸ್.ಆರ್.ಜಿ ಕನ್ವೀನರ್ ಮುಖ್ಯೋಪಾಧ್ಯಾಯಿನಿ
21/07/15
ಚಾಂದ್ರ ದಿನ
ಚಂದ್ರಯಾತ್ರೆ ಪ್ರಾತ್ಯಕ್ಷಿಕೆ ಚಿತ್ರ ಪ್ರದರ್ಶನ , ರಸ ಪ್ರಶ್ನೆ, ವೀಡಿಯೋ ಪ್ರದರ್ಶನ
ವಿಜ್ಞಾನ ಸಂಘ
ತರಗತಿ ಅಧ್ಯಾಪಕರು
ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
24/07/15
ಆರೋಗ್ಯ ಮಾಹಿತಿ ತರಬೇತಿ / ರಕ್ಷಕರಿಗೆ ಆರೋಗ್ಯ ಕ್ಲಬ್ ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
31/07/15
ಎಸ್.ಆರ್.ಜಿ ಸಭೆ, ತಿಂಗಳ ಅವಲೋಕನ ಎಸ್.ಆರ್.ಜಿ ಕನ್ವೀನರ್ ಮುಖ್ಯೋಪಾಧ್ಯಾಯಿನಿ


4.7.15


ಶಾಲೆಯಗೊಂದು ತರಕಾರಿ ತೋಟ....









2.7.15

                 ಪಿ.ಟಿ.ಎ ಮಹಾಸಭೆಯು 01 07 2015 ನೇ ಬುಧವಾರ ದಂದು ಜರಗಿತು.....



ಶಾಲೆಯ 2ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕುಮಾರಿ ಹರಿಣಾಕ್ಷಿ ಪಿತೃ ವಿಯೋಗದಲ್ಲಿದ್ದ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದದವರು , ವಿದ್ಯಾರ್ಥಿಗಳು ಮನೆ ಸಂದರ್ಶಿಸಿ ಸಾಂತ್ವನ ನೀಡಿದರು , ಮತ್ತು ಸಹಪಾಠಿಗೆ ಸಾಂತ್ವನ ನಿಧಿ ರೂಪೀಕರಿಸಿ ವಿದ್ಯಾರ್ಥಿಗಳು ,ರಕ್ಷಕರು ಮತ್ತು ಶಾಲಾ ಅಧ್ಯಾಪಕ ವೃಂದದವರು ಸಂಗ್ರಹಿಸಿದ ಸುಮಾರು 3100 ರೂ ಗಳನ್ನು ಕುಮಾರಿ ಹರಿಣಾಕ್ಷಿಯವರ ಕುಟುಂಬಕ್ಕೆ ಪಿ.ಟಿ.ಎ ಮಹಾಸಭೆಯಲ್ಲಿ ಹಸ್ತಾಂತರಿಸಲಾಯಿತು













ಪಿ.ಟಿ., ಎಂ.ಪಿ.ಟಿ.ಎ ಮಹಾಸಭೆ

ಪೆರ್ಮುದೆ : ಬಿ.ಪಿ..ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ 2015-16 ನೇ ವರ್ಷದ ಪಿ.ಟಿ., ಎಂ.ಪಿ.ಟಿ.ಎ ಮಹಾಸಭೆ ಹಾಗೂ ಸದಸ್ಯರ ಆಯ್ಕೆ ಜರಗಿತು.ಅಧ್ಯಾಪಿಕೆ ಸ್ಮಿತಾ ರವರು ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ,ಪಿ.ಟಿ.ಎ ಅಧ್ಯಕ್ಷರಾದ ಶ್ರೀ ರಾಮ್ ಪ್ರಕಾಶ್, ಎಂ.ಪಿ.ಟಿ.ಎ ಅಧ್ಯಕ್ಷೆಯಾದ ಚಂದ್ರಾವತಿ, ಅರಬಿಕ್ ಅಧ್ಯಾಪಕರಾದ ಶ್ರೀ ಮುನೀರ್, ಎಂಬಿವರು ಉಪಸ್ಥಿತರಿದ್ದರು. ಈ ವರ್ಷ ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ರಾಮ್ ಪ್ರಕಾಶ್ ರವರನ್ನು ಪುನರಾಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಶ್ರೀ ಮೊಹಮ್ಮದ್ ಅಲಿ ಯವರನ್ನು ಹಾಗೂ ಒಂಭತ್ತು ಸದಸ್ಯರನ್ನು ಒಳಗೊಂಡ ಎಂ.ಪಿ.ಟಿ.ಎ ರೂಪಿಸಲಾಯಿತು . ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಕುಸುಮ ಮತ್ತು ಉಪಾಧ್ಯಕ್ಷೆಯಾಗಿ ಕುಸುಮಾವತಿ ಯವರನ್ನು ಆಯ್ಕೆಮಾಡಲಾಯಿತು. ಶಾಲಾ ವಾಹನ ವ್ಯವಸ್ಥೆ,, ತರಗತಿಯ ಕಾರ್ಯ ಚಟುವಟಿಕೆಗಳು, ಮಕ್ಕಳ ವೈಕ್ತಿ ಶುಚಿತ್ವ, ಎಂಬಿತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.ಶಾಲೆಯ 2ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕುಮಾರಿ ಹರಿಣಾಕ್ಷಿ ಪಿತೃ ವಿಯೋಗದಲ್ಲಿದ್ದ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳು ಮನೆ ಸಂದರ್ಶಿಸಿ ಸಾಂತ್ವನ ನೀಡಿದರು ,ಮತ್ತು ಸಹಪಾಠಿಗೆ ಸಾಂತ್ವನ ನಿಧಿ ರೂಪೀಕರಿಸಿ ವಿದ್ಯಾರ್ಥಿಗಳು ,ರಕ್ಷಕರು ಮತ್ತು ಶಾಲಾ ಅಧ್ಯಾಪಕ ವೃಂದದವರು ಸಂಗ್ರಹಿಸಿದ ಸುಮಾರು 3100 ರೂ ಗಳನ್ನು ಕುಮಾರಿ ಹರಿಣಾಕ್ಷಿಯವರ ಕುಟುಂಬಕ್ಕೆ ಸಭೆಯಲ್ಲಿ ಹಸ್ತಾಂತರಿಸಲಾಯಿತು ಅಧ್ಯಾಪಕರಾದ ಸದಾಶಿವ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು.

ಬಿ.ಪಿ.ಪಿ.ಎ.ಎಲ್.ಪಿ. ಶಾಲೆ ಪೆರ್ಮುದೆ


ಸಹಪಾಠಿಗೆ ಸಾಂತ್ವನ

ಇಂದಿನ ಕಲಿಕೆಯಲ್ಲಿ ಮಗುವಿನ ಸಾಮಾಜಿಕ ಮತ್ತು ಭಾವನಾತ್ಮಕ ವಲಯಗಳ ಬೆಳವಣಿಗೆ,ನ್ನಂತೆ ತನ್ನ ಸಮಾಜದಲ್ಲಿ ಕಷ್ಟತೆ ಅನುಭವಿಸುವವರ ಬಗ್ಗೆ ತಿಳಿದುಕೊಂಡು ನೆರವಾಗುವ ಮನೋಭಾವ ಬೆಳೆಸಲು ಪ್ರಯತ್ನಿಸಬೇಕಾಗಿದೆ.ಈ ನಿಟ್ಟಿನಲ್ಲಿ ಬಿ.ಪಿ.ಪಿ.ಎಲ್.ಪಿ.ಶಾಲೆ ಪೆರ್ಮುದೆ
ಯ ಸಹಪಾಠಿಗೆ ಸಾಂತ್ವನ ಚಟುವಟಿಕೆ ಮಾದರಿಯಾಗಿದೆ.
ಶಾಲೆಯ 2ನೇ ತರಗತಿಯಲ್ಲಿ ಕಲಿಯುತ್ತಿರುವ ಅತ್ಯಂತ ಬಡ ಕುಟುಂಬದ ವಿದ್ಯಾರ್ಥಿನಿ ಕುಮಾರಿ ಹರಿಣಾಕ್ಷಿ ಪಿತೃ ವಿಯೋಗದಲ್ಲಿದ್ದ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದದವರು , ವಿದ್ಯಾರ್ಥಿಗಳು ಮನೆ ಸಂದರ್ಶಿಸಿ ಸಾಂತ್ವನ ನೀಡಿದರು , ಮತ್ತು ಸಹಪಾಠಿಗೆ ಸಾಂತ್ವನ ನಿಧಿ ರೂಪೀಕರಿಸಿ ವಿದ್ಯಾರ್ಥಿಗಳು ,ರಕ್ಷಕರು ಮತ್ತು ಶಾಲಾ ಅಧ್ಯಾಪಕ ವೃಂದದವರು ಸಂಗ್ರಹಿಸಿದ ಸುಮಾರು 3100 ರೂ ಗಳನ್ನು ಕುಮಾರಿ ಹರಿಣಾಕ್ಷಿಯವರ ಕುಟುಂಬಕ್ಕೆ ಪಿ.ಟಿ.ಎ ಮಹಾಸಭೆಯಲ್ಲಿ ಹಸ್ತಾಂತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ರೂಪೀಕರಿಸಿದ ಸಹಪಾಠಿಗೆ "ಸಾಂತ್ವನ ನಿಧಿ' ಚಟುವಟಿಕೆ ಪಿ.ಟಿ.ಎ ಹಾಗೂ ಊರವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು.