2.7.15


ಬಿ.ಪಿ.ಪಿ.ಎ.ಎಲ್.ಪಿ. ಶಾಲೆ ಪೆರ್ಮುದೆ


ಸಹಪಾಠಿಗೆ ಸಾಂತ್ವನ

ಇಂದಿನ ಕಲಿಕೆಯಲ್ಲಿ ಮಗುವಿನ ಸಾಮಾಜಿಕ ಮತ್ತು ಭಾವನಾತ್ಮಕ ವಲಯಗಳ ಬೆಳವಣಿಗೆ,ನ್ನಂತೆ ತನ್ನ ಸಮಾಜದಲ್ಲಿ ಕಷ್ಟತೆ ಅನುಭವಿಸುವವರ ಬಗ್ಗೆ ತಿಳಿದುಕೊಂಡು ನೆರವಾಗುವ ಮನೋಭಾವ ಬೆಳೆಸಲು ಪ್ರಯತ್ನಿಸಬೇಕಾಗಿದೆ.ಈ ನಿಟ್ಟಿನಲ್ಲಿ ಬಿ.ಪಿ.ಪಿ.ಎಲ್.ಪಿ.ಶಾಲೆ ಪೆರ್ಮುದೆ
ಯ ಸಹಪಾಠಿಗೆ ಸಾಂತ್ವನ ಚಟುವಟಿಕೆ ಮಾದರಿಯಾಗಿದೆ.
ಶಾಲೆಯ 2ನೇ ತರಗತಿಯಲ್ಲಿ ಕಲಿಯುತ್ತಿರುವ ಅತ್ಯಂತ ಬಡ ಕುಟುಂಬದ ವಿದ್ಯಾರ್ಥಿನಿ ಕುಮಾರಿ ಹರಿಣಾಕ್ಷಿ ಪಿತೃ ವಿಯೋಗದಲ್ಲಿದ್ದ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದದವರು , ವಿದ್ಯಾರ್ಥಿಗಳು ಮನೆ ಸಂದರ್ಶಿಸಿ ಸಾಂತ್ವನ ನೀಡಿದರು , ಮತ್ತು ಸಹಪಾಠಿಗೆ ಸಾಂತ್ವನ ನಿಧಿ ರೂಪೀಕರಿಸಿ ವಿದ್ಯಾರ್ಥಿಗಳು ,ರಕ್ಷಕರು ಮತ್ತು ಶಾಲಾ ಅಧ್ಯಾಪಕ ವೃಂದದವರು ಸಂಗ್ರಹಿಸಿದ ಸುಮಾರು 3100 ರೂ ಗಳನ್ನು ಕುಮಾರಿ ಹರಿಣಾಕ್ಷಿಯವರ ಕುಟುಂಬಕ್ಕೆ ಪಿ.ಟಿ.ಎ ಮಹಾಸಭೆಯಲ್ಲಿ ಹಸ್ತಾಂತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ರೂಪೀಕರಿಸಿದ ಸಹಪಾಠಿಗೆ "ಸಾಂತ್ವನ ನಿಧಿ' ಚಟುವಟಿಕೆ ಪಿ.ಟಿ.ಎ ಹಾಗೂ ಊರವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು.



No comments:

Post a Comment