2.7.15

                 ಪಿ.ಟಿ.ಎ ಮಹಾಸಭೆಯು 01 07 2015 ನೇ ಬುಧವಾರ ದಂದು ಜರಗಿತು.....



ಶಾಲೆಯ 2ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕುಮಾರಿ ಹರಿಣಾಕ್ಷಿ ಪಿತೃ ವಿಯೋಗದಲ್ಲಿದ್ದ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದದವರು , ವಿದ್ಯಾರ್ಥಿಗಳು ಮನೆ ಸಂದರ್ಶಿಸಿ ಸಾಂತ್ವನ ನೀಡಿದರು , ಮತ್ತು ಸಹಪಾಠಿಗೆ ಸಾಂತ್ವನ ನಿಧಿ ರೂಪೀಕರಿಸಿ ವಿದ್ಯಾರ್ಥಿಗಳು ,ರಕ್ಷಕರು ಮತ್ತು ಶಾಲಾ ಅಧ್ಯಾಪಕ ವೃಂದದವರು ಸಂಗ್ರಹಿಸಿದ ಸುಮಾರು 3100 ರೂ ಗಳನ್ನು ಕುಮಾರಿ ಹರಿಣಾಕ್ಷಿಯವರ ಕುಟುಂಬಕ್ಕೆ ಪಿ.ಟಿ.ಎ ಮಹಾಸಭೆಯಲ್ಲಿ ಹಸ್ತಾಂತರಿಸಲಾಯಿತು













ಪಿ.ಟಿ., ಎಂ.ಪಿ.ಟಿ.ಎ ಮಹಾಸಭೆ

ಪೆರ್ಮುದೆ : ಬಿ.ಪಿ..ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ 2015-16 ನೇ ವರ್ಷದ ಪಿ.ಟಿ., ಎಂ.ಪಿ.ಟಿ.ಎ ಮಹಾಸಭೆ ಹಾಗೂ ಸದಸ್ಯರ ಆಯ್ಕೆ ಜರಗಿತು.ಅಧ್ಯಾಪಿಕೆ ಸ್ಮಿತಾ ರವರು ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ,ಪಿ.ಟಿ.ಎ ಅಧ್ಯಕ್ಷರಾದ ಶ್ರೀ ರಾಮ್ ಪ್ರಕಾಶ್, ಎಂ.ಪಿ.ಟಿ.ಎ ಅಧ್ಯಕ್ಷೆಯಾದ ಚಂದ್ರಾವತಿ, ಅರಬಿಕ್ ಅಧ್ಯಾಪಕರಾದ ಶ್ರೀ ಮುನೀರ್, ಎಂಬಿವರು ಉಪಸ್ಥಿತರಿದ್ದರು. ಈ ವರ್ಷ ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ರಾಮ್ ಪ್ರಕಾಶ್ ರವರನ್ನು ಪುನರಾಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಶ್ರೀ ಮೊಹಮ್ಮದ್ ಅಲಿ ಯವರನ್ನು ಹಾಗೂ ಒಂಭತ್ತು ಸದಸ್ಯರನ್ನು ಒಳಗೊಂಡ ಎಂ.ಪಿ.ಟಿ.ಎ ರೂಪಿಸಲಾಯಿತು . ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಕುಸುಮ ಮತ್ತು ಉಪಾಧ್ಯಕ್ಷೆಯಾಗಿ ಕುಸುಮಾವತಿ ಯವರನ್ನು ಆಯ್ಕೆಮಾಡಲಾಯಿತು. ಶಾಲಾ ವಾಹನ ವ್ಯವಸ್ಥೆ,, ತರಗತಿಯ ಕಾರ್ಯ ಚಟುವಟಿಕೆಗಳು, ಮಕ್ಕಳ ವೈಕ್ತಿ ಶುಚಿತ್ವ, ಎಂಬಿತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.ಶಾಲೆಯ 2ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕುಮಾರಿ ಹರಿಣಾಕ್ಷಿ ಪಿತೃ ವಿಯೋಗದಲ್ಲಿದ್ದ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳು ಮನೆ ಸಂದರ್ಶಿಸಿ ಸಾಂತ್ವನ ನೀಡಿದರು ,ಮತ್ತು ಸಹಪಾಠಿಗೆ ಸಾಂತ್ವನ ನಿಧಿ ರೂಪೀಕರಿಸಿ ವಿದ್ಯಾರ್ಥಿಗಳು ,ರಕ್ಷಕರು ಮತ್ತು ಶಾಲಾ ಅಧ್ಯಾಪಕ ವೃಂದದವರು ಸಂಗ್ರಹಿಸಿದ ಸುಮಾರು 3100 ರೂ ಗಳನ್ನು ಕುಮಾರಿ ಹರಿಣಾಕ್ಷಿಯವರ ಕುಟುಂಬಕ್ಕೆ ಸಭೆಯಲ್ಲಿ ಹಸ್ತಾಂತರಿಸಲಾಯಿತು ಅಧ್ಯಾಪಕರಾದ ಸದಾಶಿವ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು.

No comments:

Post a Comment