22.9.15



 ಶ್ರೀ. ನಾರಾಯಣ ಗುರು


ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ 'ನಾರಾಯಣ ಗುರು,' ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, 'ದೇಶಸೇವೆಯೇ ಈಶ ಸೇವೆಯೆಂದು,'

ನಾರಾಯಣರ ಜನನ, ಬಾಲ್ಯ ಮತ್ತು ಸಮಾಜ ಸೇವೆ

ಕೇರಳದ 'ತೀಯಾ ಸಮಾಜ,' ದವರಾದ 'ಮದನ್ ಆಸನ್,' ಹಾಗೂ 'ಕುಟ್ಟಿ ಅಮ್ಮಾಳ್,' ಎಂಬ ದಂಪತಿಗಳಿಗೆ ಜನಿಸಿದರು. ಆಗ ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ಜಾತಿ, ಕೆಳಜಾತಿ, ಅಸ್ಪೃಷ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಆಗ ರು ಪಣತೊಟ್ಟು ತಮ್ಮ ಜೀವನದ ಧ್ಯೇಯವೆಂದು ಶಪಥಮಾಡಿದರು. ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ ಅವರಿಗೆ ಸರಿಬೀಳಲಿಲ್ಲ. ಹೀಗೆ ಸಮಾಜದ ವಿರೋಧಾಭಾಸಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಳನೆಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನಗಳಲ್ಲಿ ಅನುಮತಿಕೊಡಲು ಅವರು ಬೇಡಲಿಲ್ಲ. ಅಥವಾ ಹಿಂಸಾಚಾರದ ಚಳುವಳಿಗಳನ್ನೂ ನಡೆಸದೆ, ತಾವೇ ದೇವಾಲಯಗಳನ್ನು ಸ್ಥಾಪಿಸುವುದರಮೂಲಕ ಒಂದು ಹೊಸ-ಅನನ್ಯ-ಆಲೋಚನಾಕ್ರಮವನ್ನು ಹುಟ್ಟುಹಾಕಿದರು. ಕೇರಳದಾದ್ಯಂತವೂ ಸುಮಾರು ೬೦ ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು.

ಸುಮಾರು ೬೦ ದೇವಾಲಯಗಳ ಸ್ಥಾಪನ

ಹಾಗೆ ಅವರು ಶುರುಮಾಡಿದ ಮೊಟ್ಟಮೊದಲ, 'ಲಿಂಗ ಪ್ರತಿಷ್ಠಾಪನೆ,' ೧೮೮೮ ರಲ್ಲಿ, 'ಅರವೀಪುರಂ,' ಎಂಬ ಪ್ರದೇಶದಲ್ಲಿ, ನಡೆಯಿತು. ೧೯೨೧ ರಲ್ಲಿ ಮತ್ತೊಂದು ಹೊಸ ವಿಧಾನವನ್ನು ಜನರ ಸಮ್ಮುಖದಲ್ಲಿ ತಂದರು. ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, 'ಮಿಶ್ರ ಭೋಜನ,' ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು 'ಸಹೋದರ ಸಮ್ಮೇಳನ,' ದ ಏರ್ಪಾಡಿನ ಮೂಲಕ ಸಾಧ್ಯವಾಯಿತು. ಅಸ್ಪೃಷ್ಯರನ್ನು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದರು. ಕೆಲವರು ಮತಾಂತರ, ಇದಕ್ಕೆ ಸಮಾಧಾನವೆನ್ನುವ ಮಾತಾಡಿದರು. ಆದರೆ, ನಾರಾಯಣರು, ಇದಕ್ಕೆ ಒಪ್ಪಲಿಲ್ಲ. 'ಆಲ್ವಾಯಿ', ಯೆಂಬಲ್ಲಿ , ಫೆಬ್ರವರಿ, ೧೯೨೪ ರಲ್ಲಿ, ೨ ದಿನಗಳ 'ಸರ್ವಧರ್ಮಗಳ ಸಮ್ಮೇಳನ,' ವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ 'ಬ್ರಹ್ಮ ವಿದ್ಯಾಲಯ,' ವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತದಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸಮಾಡಿ ಅಪಾರ ಅನುಭವಗಳನ್ನು ಹೊಂದಿ ಹೋದೆಡೆಯಲ್ಲೆಲ್ಲಾ ವಿಶ್ವ ಮಾನವತ್ವವನ್ನು ಬೋಧಿಸಿದರು. ಸನ್ಯಾಸಿಗಳು, ಮಹರ್ಷಿಗಳ ಜೊತೆಗೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ಹೇಳುತ್ತಿದ್ದ ವಾಕ್ಯಗಳು ಇಂದಿಗೂ ಅತ್ಯಂತ ಅರ್ಥಗರ್ಭಿತವಾಗಿವೆ. " ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು ; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ" ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ಯವೇ ನಮ್ಮ ಗುರಿಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಒತ್ತಿ-ಒತ್ತಿ ಹೇಳುತ್ತಿದ್ದರು.

ನಾರಾಯಣ ಗುರುಗಳ 'ಜನ್ಮ-ದಿನ,' ದಬಗ್ಗೆ, ಅವರ ಭಕ್ತಾದಿಗಳ ಭಿನ್ನಾಭಿಪ್ರಾಯಗಳು

ಮಲಯಾಳಂ ಪಂಚಾಂಗದ ಪ್ರಕಾರ, ಶೀ ನಾರಾಯಣ ಗುರುಗಳು, 'ಕೊಲ್ಲಂ ವರ್ಷ', ೧೦೩೦, ಸಿಂಹಮಾಸ, ಶತಭಿಷಾ ನಕ್ಷತ್ರದಂದು ಜನಿಸಿದರೆಂಬುದನ್ನು, ಬಹುತೇಕ ಜನ ಒಪ್ಪುತ್ತಾರೆ. ಈ ಪವಿತ್ರದಿನವನ್ನು ಇಂಗ್ಲೀಷ್ ಕ್ಯಾಲೆಂಡರಿಗೆ, ಪರಿವರ್ತಿಸಿದಾಗ ಆದಿನವನ್ನು ೨೬-೦೮-೧೯೫೪ ಎಂದು ಗುರುತಿಸುವ ಮೂಲಕ ವ್ಯತ್ಯಾಸ ಕಾಣಿಸುತ್ತದೆ. ಕೆಲವರು, ೨೬-೦೮-೧೯೫೪ ಎಂದು ಹೇಳುವುದರ ಮೂಲಕ, ೧೮೫೪ ರಲ್ಲಿ ಜನಿಸಿದರೆಂದು ಖಾತ್ರಿಮಾಡುತ್ತಾರೆ. ೧೮-೦೯-೧೯೫೪ ಎಂದು ಬಹುಶಃ ಅವರ 'ನಾಮಕರಣದ ದಿನ,' ವನ್ನು ಹೇಳುತ್ತಾರೆ. ಮಂಗಳೂರಿನ ಪತ್ರಿಯೊಂದರಲ್ಲಿ ೨೮-೦೮-೧೯೫೫ ಎಂದು ಬರೆಯಲ್ಪಟ್ಟಿದೆ. ನಾರಾಯಣ ಗುರುಗಳ ೨೮-೦೮-೧೯೫೫ 'ಇಲ್ ಲ್ಯು ಸ್ಟ್ರೇಟೆಡ್ ವೀಕ್ಲಿ,' ಪತ್ರಿಕೆ ದಾಖಲಿಸಿದೆ. ಮಲಯಾಳಂ ಭಾಶೆಯ ಹಿರಿಯಪಂಡಿತರೂಬ್ಬರ ಪ್ರಕಾರ, ೧೮೫೬ ಸರಿಯೆಂದು ಹೇಳಿದ್ದಾರೆ. ಹೀಗೆ ೧೯೫೪, ೧೯೫೫, ೧೯೫೬ ಎಂಬ ಮೂರು ಉಲ್ಲೇಖಗಳಿವೆ. ಗುರುಗಳು ಬದುಕಿದ್ದಾಗಲೇ ಅವರ ೬೦ ನೇ ವರ್ಷವನ್ನು ೧೯೧೬ ರಲ್ಲಿ, ಆಚರಿಸಿದ್ದರು. ಆದ್ದರಿಂದ ಅದು ೧೯೫೬ ರೇ ಇರಬಹುದೆನ್ನುವುದು ಸಾಮಾನ್ಯ ಪ್ರಜ್ಞೆಯ ಸಂಕೇತವಾಗಿದೆ.





                    



No comments:

Post a Comment