3.4.17

ಪೆರ್ಮುದೆ ಶಾಲೆಯಲ್ಲಿ  ಶಾಲಾಭಿವೃದ್ಧಿ ವಿಚಾರಗೋಷ್ಠಿ


  ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ  ಶಾಲಾಭಿವೃದ್ಧಿ ವಿಚಾರಗೋಷ್ಠಿ ಜರಗಿತು.  ಸಮಾರಂಭವನ್ನು ಕೋಳಾರು ಸತೀಶ್ಚಂದ್ರ ಭಂಡಾರಿ  ಉದ್ಘಾಟಿಸಿ ಶಾಲೆಯು ಶೈಕ್ಷಣಿಕವಾಗಿಯೂ , ಭೌತಿಕವಾಗಿಯೂ , ಅಭಿವೃದ್ಧಿ ಹೊಂದುತ್ತಿದ್ದು ಶಾಲಾಭಿವೃದ್ಧಿಯಲ್ಲಿ ಊರಿನ ಎಲ್ಲಾ ಸಂಘ ಸಂಸ್ಥೆಗಳು , ವಿದ್ಯಾಭಿಮಾನಿಗಳು  ಕೈಜೋಡಿಸಬೇಕೆಂದು  ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ  ಶ್ರೀಯುತ ರವಿಶಂಕರ ಭಟ್ ವಹಿಸಿಕೊಂಡರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ  ಶ್ರೀಯುತ ಹರಿಹರ ಭಟ್  ಕುಂಬಳೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ  ಶ್ರೀಯುತ ಪೀಟರ್  ರೋಡ್ರಿಗಸ್ ಪಿ.ಟಿ.ಎ ಅಧ್ಯಕ್ಷರಾದ ಶ್ರೀಯುತ ಮೊಹಮ್ಮದಾಲಿ ಶುಭಹಾರೈಸಿದರು.  ಅಧ್ಯಾಪಕ ಸದಾಶಿವ ಮಾಸ್ಟರ್ ಪೊಯ್ಯೆ ಶಾಲಾಭಿವೃದ್ಧಿ ಪ್ರಬಂಧ ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶಾರದ.ಎ ಸ್ವಾಗತಿಸಿ, ಅಬ್ದುಲ್ ಮುನೀರ್ ವಂದಿಸಿದರು.









No comments:

Post a Comment