ಪೈವಳಿಕೆ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ಸ್ಕಂದ ಪ್ರಸಾದ್ ಕನ್ನಡ ಕಂಠ ಪಾಠ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಕನ್ನಡ ಲಘು ಸಂಗೀತ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತ ಅಮ್ಮಂಗಲ್ಲು ರಾಮಕೃಷ್ಣ ಪ್ರಸಾದ್ ಹಾಗೂ ದಿವ್ಯ ಭಾರತಿ ದಂಪತಿಗಳ ಸುಪುತ್ರ.ಶಾಲಾ ಅಧ್ಯಾಪಕ ವೃಂದ,ವಿದ್ಯಾರ್ಥಿಗಳು,ಪಿ.ಟಿ.ಎ, ಅಭಿನಂದನೆ ಸಲ್ಲಿಸಿದರು.
Pages
- Home
- ABOUT US
- GALLERY
- S.VISITORS
- CHILDREN'S CORNER
- COMMENTS
- RESOURCE
- ACTIVITY CALENDAR
- VIDEOS
- ಸಾಕ್ಷರ 2014
- ಮೆಟ್ರಿಕ್ ಮೇಳ
- submit your details
- STAFF DETAILS
- SCHOOL DAY 2015
- Manjeshwar Sub Dist Pravesanolsavam 2015-16
- ಕೃಷಿ ತೋಟ
- ಮೆಟ್ರಿಕ್ ಮೇಳ 2015
- SCHOOL DAY 2016
- SCHOOL DAY 2017
- ಕಲಿಕೋತ್ಸವ 2019
- Children's Day 2021
- SCHOOL DAY 2024
WELCOME 2 OUR SCHOOL BLOG
BREAKING NEWS
Eye Test
3.11.19
ಕಲೋತ್ಸವ 2019-20
ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆ
1. ಕನ್ನಡ ಕಂಠ ಪಾಠ Skanda Prasad A got first place with A grade2. ಲಘು ಸಂಗೀತ ಕನ್ನಡ Skanda Prasad A got second place with A grade
3. English Recitation Skanda Prasad A got A grade
4. Padyam chollal Arabic Imran Abdulla got Third with A grade
5. ಕನ್ನಡ ಭಾಷಣ Ayana got A grade
6. Mono Act Ayana got B grade
7. English Action Song Muhammad Jaish Got A grade
8. Kannada Group song got B grade
9. Mappilapatu Muhammad Jaish got C grade
10. Padyam chollal Malayalam Ayana got C grade
LP Arabic Kalostava 2019
1.Padyam chollal Ahammed Najaad Third place with A grade2. Arabi Ganam Ahammed Sabir got A grade
3. Sangha Ganam A grade
4. Kada parayal Ramseena got A grade
5.Quiz Ramseena got A grade
6. Kaiyyezhuttu. Kadeejath Haya got B grade
7. Pada Nirmanam. Mariyam Shamna got B grade
8. Quran parayanam Ahammed Najaad got B grade
9. Abhinaya Ganam Mariyam Sahala got B grade
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಗೆ ಗಣಿತ ಮೇಳ ಸಮಗ್ರ ಪ್ರಶಸ್ತಿ
ಮಂಜೇಶ್ವರ ಉಪಜಿಲ್ಲಾ ಎಲ್.ಪಿ ಮಟ್ಟದ ಗಣಿತ ಮೇಳ ಸಮಗ್ರ ಪ್ರಶಸ್ತಿಯನ್ನು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆ ತನ್ನದಾಗಿಸಿಕೊಂಡಿದೆ.ಜೊಮೆಂಟ್ರಿಕಲ್ ಚಾರ್ಟ್ ಸ್ಪರ್ಧೆಯಲ್ಲಿ ಅಯನ ಕೆ ‘ಎ’ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಸಂಖ್ಯಾ ಚಾರ್ಟ್ ಸ್ಪರ್ಧೆಯಲ್ಲಿ ರಂಶೀನ ‘ಎ’ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಗಣಿತ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅಹಮ್ಮದ್ ಸಾಬಿರ್ ‘ಎ’ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಗಣಿತ ಜಾಣ್ಮೆಲೆಕ್ಕ ಸ್ಪರ್ಧೆಯಲ್ಲಿ ಸ್ಕಂದ ಪ್ರಸಾದ್ ಎ ‘ಎ’ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.ಶಾಲಾ ಪಿ ಟಿ ಎ , ಅಧ್ಯಾಪಕ ವೃಂದ , ವಿದ್ಯಾರ್ಥಿಗಳು ವಿಜೇತರಿಗೆ ಅಭಿನಂದಿಸಿದರು.
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ದಸರಾ ನಾಡಹಬ್ಬ ಆಚರಣೆ ಹಾಗೂ ಶಾರದಾ ಪೂಜೆ
ಜರಗಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ
ನೀಡಿದರು.ಶಾಲಾ ವಿದ್ಯಾರ್ಥಿಗಳು,ರಕ್ಷಕರು, ಅಧ್ಯಾಪಕ ವೃಂದ ಭಜನಾ ಕಾರ್ಯಕ್ರಮ
ನಡೆಸಿಕೊಟ್ಟರು. ನಿವೃತ್ತ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ ಶಾರದಾ ಪೂಜೆ
ಮಾಡಿದರು.ಬಳಿಕ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಓಝೋನ್ ದಿನಾಚರಣೆ
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಓಝೋನ್ ದಿನಾಚರಣೆ ಜರಗಿತು.ಮುಖ್ಯೋಪಾಧ್ಯಾಯರಾದ ಸದಾಶಿವ ಕೆ ಕೆ ಓಝೋನ್ ದಿನಾಚರಣೆ ಕುರಿತು ತಿಳಿಸಿ ಕಾರ್ಯಕ್ರಮ ಉದ್ಘಾಟಿಸಿದರು.ವಿಜ್ಞಾನ ಸಂಘ ಕಾರ್ಯದರ್ಶಿ ಜಯಪ್ರಸಾದ್ ಓಝೋನ್ ಪದರು,ಅದರ ನಾಶ, ಸಂರಕ್ಷಣೆ, ಎಂಬಿತ್ಯಾದಿ ವಿಚಾರಗಳ ವೀಡಿಯೋಗಳನ್ನು ಪ್ರದರ್ಶಿಸಿ ವಿವರಿಸಿದರು. ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಿಸಲಾಯಿತು.
ಶಿಕ್ಷಕರು,ರಕ್ಷಕರು, ವಿದ್ಯಾರ್ಥಿಗಳು ಸೇರಿ ಹೂವಿನ ರಂಗೋಲಿ ರಚಿಸಿದರು.ವಿದ್ಯಾರ್ಥಿಗಳಿಗೆ ಹಾಗೂ ರಕ್ಷರರಿಗೆ
ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪರಿಸರದಿಂದ ಲಭಿಸುವ ವಿವಿಧ ಫಲವಸ್ತುಗಳನ್ನು
ಬಹುಮಾನವಾಗಿ ನೀಡಲಾಯಿತು.ಬಳಿಕ ಎಲ್ಲರಿಗೂ ಓಣಂ ಸಹಭೋಜನ ವಿತರಿಸಲಾಯಿತು. ಶಾಲಾ
ಪಿ.ಟಿ.ಎ, ಮಾತೃ ಸಂಘ , ಅಧ್ಯಾಪಕ ವೃಂದ ಸಹಕರಿಸಿದರು.
15.8.19
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ
ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಬಿ.ಪಿ,ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಜರಗಿತು. ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಧ್ವಜಾರೋಹಣ ಗೈದರು.ಬಳಿಕ ಸಭಾ ಕಾರ್ಯಕ್ರಮ
ಜರಗಿತು.ವಾರ್ಡು ಸದಸ್ಯರು ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ
ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್, ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ , ಶಾಲಾ
ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ, ಪಿ.ಟಿ.ಎ ಶ್ರೀ ಅಧ್ಯಕ್ಷರಾದ ಮೊಹಮ್ಮದಾಲಿ,
ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ, ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ, ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್
ರೈ ಕುಡಾಲು ಗುತ್ತು,ರಕ್ಷಕರು ಹಾಗೂ ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
ವಾರ್ಡು ಸದಸ್ಯರು ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ
ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾತಂತ್ರ್ಯೋತ್ಸವದ
ಶುಭಾಶಯಗಳನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಸ್ವಾತಂತ್ರ್ಯೋತ್ಸ ಹಾಗೂ ಅದರ ಮಹತ್ವದ ಕುರಿತು
ತಿಳಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ವರ್ಧೆಗಳ ವಿಜೇತರಿಗೆ ಅತಿಥಿಗಳು
ಬಹುಮಾನಗಳನ್ನು ವಿತರಿಸಿದರು.ನಂದನ ಬಾಲಗೋಕುಲ ಸಮಿತಿ ಸುಖಶೈಲ ಪೆರ್ಮುದೆ ಹಾಗೂ ನಿವೃತ್ತ
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಸಿಹಿ ತಿಂಡಿ ನೀಡಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ
ಡೆಫ್ನಿ ಸ್ಮಿತಾ ಡಯಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಧ್ಯಾಪಕರಾದ ಜಯಪ್ರಸಾದ್
ವಂದಿಸಿದರು.
31.7.19
ಚಾಂದ್ರಾ ದಿನಾಚರಣೆ
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಚಾಂದ್ರಾ ದಿನಾಚರಣೆ
ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಉದ್ಘಾಟಿಸಿ ಚಾಂದ್ರಾ ದಿನದ ಕುರಿತಾದ ವಿಚಾರಗಳನ್ನು
ತಿಳಿಸಿದರು. ವಿಜ್ಞಾನ ಕ್ಲಬ್ ನ ಕನ್ವೀನರ್ ಅಧ್ಯಾಪಕರಾದ ಜಯಪ್ರಸಾದ್ ಚಾಂದ್ರಾ ದಿನಕ್ಕೆ ಸಂಬಂಧಿಸಿದ
ವೀಡಿಯೋ, ಸ್ಲೈಡ್ ಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದರು.ಬಳಿಕ ಅಧ್ಯಾಪಿಕೆ ಡೆಫ್ನಿ ಸ್ಮಿತಾ ಡಯಾಸ್
ಚಾಂದ್ರಾ ದಿನಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಸ್ಪರ್ದೆಯಲ್ಲಿ ಸ್ಕಂದ ಪ್ರಸಾದ್.ಎ ಪ್ರಥಮ ಸ್ಥಾನ
ಹಾಗೂ ಶ್ರೇಯಸ್ ದ್ವಿತೀಯ ಸ್ಥಾನ ಪಡೆದುಕೊಂಡರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
ಬಿ ಪಿ ಪಿ ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ 2019 20 ಸಾಲಿನ ಮಂತ್ರಿಮಂಡಲ ಚುನಾವಣೆಯು
ಪ್ರಜಾಪ್ರಭುತ್ವ ಮಾದರಿಯಲ್ಲಿ ಜರಗಿತು.ಮುಖ್ಯ ಚುನಾವಣಾ ಅಧಿಕಾರಿಗಳಾದ ಶಾಲಾ
ಮಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಅವರಿಗೆ ಅಭ್ಯರ್ಥಿಗಳು ನಾಮಪತ್ರ
ಸಲ್ಲಿಸಿದರು.ಅಭ್ಯರ್ಥಿಗಳಿಗೆ ಮತಚಿಹ್ನೆಗಳನ್ನುನೀಡಲಾಯಿತು.ಒಟ್ಟು ಹನ್ನೊಂದು ಮಂದಿ
ಸ್ಪರ್ಧಾರ್ಥಿಗಳಿದ್ದರು. ಬಳಿಕಮತ ಪ್ರಚಾರ ಕಾರ್ಯಗಳುಆರಂಭಗೊಂಡಿತು.ಲಭಿಸಿದ ಮತಚಿಹ್ನೆಯನ್ನು
ಹಿಡಿದುಕೊಂಡು ಮತಯಾಚಿಸಿದರು.ಮತದಾನದ ದಿನದಂದು ಸರದಿ ಸಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ
ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡಿದರು. ಪೋಲಿಂಗ್ ಆಫೀಸರ್ ಗಳಾಗಿ ಶಾಲಾ ಶಿಕ್ಷಕ ವೃಂದ
ಸಹಕರಿಸಿದರು. ಶಾಂತಿ ಪಾಲನೆಗಾಗಿ ಶಾಲಾ ಕಬ್ ಸ್ಕೌಟ್ ವಿಭಾಗದವರು
ಇದ್ದರು.ಮತದಾನದ ಬಳಿಕ ಮುಖ್ಯ ಚುನಾವಣಾ ಅಧಿಕಾರಿಗಳಾದ ಶಾಲಾ ಮಖ್ಯೋಪಾಧ್ಯಾಯರ
ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಬಳಿಕ ಅವರು ವಿಜೇತರನ್ನು ಅಧಿಕೃತವಾಗಿ
ಘೋಷಿಸಿದರು. ಅತ್ಯಧಿಕ ಮತಗಳನ್ನು ಗಳಿಸಿದ ಸ್ಕಂದ ಪ್ರಸಾದ್ ಎ ಶಾಲಾ ನಾಯಕ ಹಾಗೂ
ಬಿ.ಜೆ ದಕ್ಷ ಶೆಟ್ಟಿ ಉಪನಾಯಕನಾಗಿ ಆಯ್ಕೆಯಾದರು.ಅಯನ.ಕೆ ಆರೋಗ್ಯ
ಮತ್ತು ಶುಚಿತ್ವ ಮಂತ್ರಿ,ಕದೀಜ ಫಸಿಯಾ ಕ್ರೀಡಾ ಮಂತ್ರಿ, ಶ್ರೀಜ. ಎಸ್.ಎ
ಸಾಂಸ್ಕೃತಿಕ ಮಂತ್ರಿಯಾಗಿಯೂ ಆಯ್ಕೆಯಾದರು. ವಿಜೇತರ ವಿಜಯ
ಯಾತ್ರೆ ನಡೆಯಿತು.ಶಾಲಾ ಮಖ್ಯೋಪಾಧ್ಯಾಯರು ಸ್ಪೀಕರ್ ಆಗಿ
ಆಯ್ಕೆಯಾದ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ
ಮೊದಲ ಮಂತ್ರಿಮಂಡಲ ಸಭೆ ಕರೆಯಲಾಯಿತು. ರಕ್ಷಕ ಶಿಕ್ಷಕ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಕೇರಳ ಸರಕಾರವು ಒದಗಿಸಿದ 2019 - 20 ಶೈಕ್ಷಣಿಕ ವರ್ಷದ ಉಚಿತ
ಶಾಲಾ ಸಮ ಸಮವಸ್ತ್ರವಿತರಣೆಯನ್ನು ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ
ಎಂ.ಕೆ ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ, ಪೆರ್ಮುದೆ ಜುಮಾ
ಮಸೀದಿಯ ಕಾರ್ಯದರ್ಶಿಯಾದ ಅಹಮ್ಮದ್ ಅಲಿ ಮಾಣಿ , ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ
ಕುಡಾಲುಗುತ್ತು , ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ
ಮೊಹಮ್ಮದಾಲಿ, ಎಸ್.ಎಸ್.ಜಿ ಸದಸ್ಯರಾದ ಖಾದರ್ ಮಾಸ್ಟರ್ ಪೆರ್ಮುದೆ ಉಪಸ್ಥಿತರಿದ್ದರು.
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಗೆ ಮಂಜೇಶ್ವರ ಶಾಸಕರಾಗಿದ್ದ ದಿವಂಗತ ಶ್ರೀ ಪಿ.ಬಿ ಅಬ್ದುಲ್ ರಝಾಕ್ ಅವರ
ಶಾಲಾಭಿವೃದ್ಧಿ ನಿಧಿಯಿಂದ ಲಭಿಸಿದ ಮೂರು ಲ್ಯಾಪ್ ಟೋಪ್ ಗಳನ್ನು ಪೈವಳಿಕೆ ಗ್ರಾಮ ಪಂಚಾಯತು
ಕ್ಷೇಮಾಭಿವೃದ್ಧಿಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಸದಾಶಿವ ಕೆ.ಕೆ, ಪೆರ್ಮುದೆ ಜುಮಾ ಮಸೀದಿಯ ಕಾರ್ಯದರ್ಶಿಯಾದ ಅಹಮ್ಮದ್ ಅಲಿ ಮಾಣಿ , ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲುಗುತ್ತು , ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಸ್.ಎಸ್.ಜಿ ಸದಸ್ಯರಾದ
ಖಾದರ್ ಮಾಸ್ಟರ್ ಪೆರ್ಮುದೆ ಉಪಸ್ಥಿತರಿದ್ದರು.
Subscribe to:
Posts (Atom)