ಬಿ ಪಿ ಪಿ ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ 2019 20 ಸಾಲಿನ ಮಂತ್ರಿಮಂಡಲ ಚುನಾವಣೆಯು
ಪ್ರಜಾಪ್ರಭುತ್ವ ಮಾದರಿಯಲ್ಲಿ ಜರಗಿತು.ಮುಖ್ಯ ಚುನಾವಣಾ ಅಧಿಕಾರಿಗಳಾದ ಶಾಲಾ
ಮಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಅವರಿಗೆ ಅಭ್ಯರ್ಥಿಗಳು ನಾಮಪತ್ರ
ಸಲ್ಲಿಸಿದರು.ಅಭ್ಯರ್ಥಿಗಳಿಗೆ ಮತಚಿಹ್ನೆಗಳನ್ನುನೀಡಲಾಯಿತು.ಒಟ್ಟು ಹನ್ನೊಂದು ಮಂದಿ
ಸ್ಪರ್ಧಾರ್ಥಿಗಳಿದ್ದರು. ಬಳಿಕಮತ ಪ್ರಚಾರ ಕಾರ್ಯಗಳುಆರಂಭಗೊಂಡಿತು.ಲಭಿಸಿದ ಮತಚಿಹ್ನೆಯನ್ನು
ಹಿಡಿದುಕೊಂಡು ಮತಯಾಚಿಸಿದರು.ಮತದಾನದ ದಿನದಂದು ಸರದಿ ಸಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ
ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡಿದರು. ಪೋಲಿಂಗ್ ಆಫೀಸರ್ ಗಳಾಗಿ ಶಾಲಾ ಶಿಕ್ಷಕ ವೃಂದ
ಸಹಕರಿಸಿದರು. ಶಾಂತಿ ಪಾಲನೆಗಾಗಿ ಶಾಲಾ ಕಬ್ ಸ್ಕೌಟ್ ವಿಭಾಗದವರು
ಇದ್ದರು.ಮತದಾನದ ಬಳಿಕ ಮುಖ್ಯ ಚುನಾವಣಾ ಅಧಿಕಾರಿಗಳಾದ ಶಾಲಾ ಮಖ್ಯೋಪಾಧ್ಯಾಯರ
ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಬಳಿಕ ಅವರು ವಿಜೇತರನ್ನು ಅಧಿಕೃತವಾಗಿ
ಘೋಷಿಸಿದರು. ಅತ್ಯಧಿಕ ಮತಗಳನ್ನು ಗಳಿಸಿದ ಸ್ಕಂದ ಪ್ರಸಾದ್ ಎ ಶಾಲಾ ನಾಯಕ ಹಾಗೂ
ಬಿ.ಜೆ ದಕ್ಷ ಶೆಟ್ಟಿ ಉಪನಾಯಕನಾಗಿ ಆಯ್ಕೆಯಾದರು.ಅಯನ.ಕೆ ಆರೋಗ್ಯ
ಮತ್ತು ಶುಚಿತ್ವ ಮಂತ್ರಿ,ಕದೀಜ ಫಸಿಯಾ ಕ್ರೀಡಾ ಮಂತ್ರಿ, ಶ್ರೀಜ. ಎಸ್.ಎ
ಸಾಂಸ್ಕೃತಿಕ ಮಂತ್ರಿಯಾಗಿಯೂ ಆಯ್ಕೆಯಾದರು. ವಿಜೇತರ ವಿಜಯ
ಯಾತ್ರೆ ನಡೆಯಿತು.ಶಾಲಾ ಮಖ್ಯೋಪಾಧ್ಯಾಯರು ಸ್ಪೀಕರ್ ಆಗಿ
ಆಯ್ಕೆಯಾದ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ
ಮೊದಲ ಮಂತ್ರಿಮಂಡಲ ಸಭೆ ಕರೆಯಲಾಯಿತು. ರಕ್ಷಕ ಶಿಕ್ಷಕ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
No comments:
Post a Comment