ಚಾಂದ್ರಾ ದಿನಾಚರಣೆ
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಚಾಂದ್ರಾ ದಿನಾಚರಣೆ
ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಉದ್ಘಾಟಿಸಿ ಚಾಂದ್ರಾ ದಿನದ ಕುರಿತಾದ ವಿಚಾರಗಳನ್ನು
ತಿಳಿಸಿದರು. ವಿಜ್ಞಾನ ಕ್ಲಬ್ ನ ಕನ್ವೀನರ್ ಅಧ್ಯಾಪಕರಾದ ಜಯಪ್ರಸಾದ್ ಚಾಂದ್ರಾ ದಿನಕ್ಕೆ ಸಂಬಂಧಿಸಿದ
ವೀಡಿಯೋ, ಸ್ಲೈಡ್ ಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದರು.ಬಳಿಕ ಅಧ್ಯಾಪಿಕೆ ಡೆಫ್ನಿ ಸ್ಮಿತಾ ಡಯಾಸ್
ಚಾಂದ್ರಾ ದಿನಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಸ್ಪರ್ದೆಯಲ್ಲಿ ಸ್ಕಂದ ಪ್ರಸಾದ್.ಎ ಪ್ರಥಮ ಸ್ಥಾನ
ಹಾಗೂ ಶ್ರೇಯಸ್ ದ್ವಿತೀಯ ಸ್ಥಾನ ಪಡೆದುಕೊಂಡರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
No comments:
Post a Comment