Pages
- Home
- ABOUT US
- GALLERY
- S.VISITORS
- CHILDREN'S CORNER
- COMMENTS
- RESOURCE
- ACTIVITY CALENDAR
- VIDEOS
- ಸಾಕ್ಷರ 2014
- ಮೆಟ್ರಿಕ್ ಮೇಳ
- submit your details
- STAFF DETAILS
- SCHOOL DAY 2015
- Manjeshwar Sub Dist Pravesanolsavam 2015-16
- ಕೃಷಿ ತೋಟ
- ಮೆಟ್ರಿಕ್ ಮೇಳ 2015
- SCHOOL DAY 2016
- SCHOOL DAY 2017
- ಕಲಿಕೋತ್ಸವ 2019
- Children's Day 2021
- SCHOOL DAY 2024
WELCOME 2 OUR SCHOOL BLOG
BREAKING NEWS
Eye Test
31.7.19
ಚಾಂದ್ರಾ ದಿನಾಚರಣೆ
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಚಾಂದ್ರಾ ದಿನಾಚರಣೆ
ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಉದ್ಘಾಟಿಸಿ ಚಾಂದ್ರಾ ದಿನದ ಕುರಿತಾದ ವಿಚಾರಗಳನ್ನು
ತಿಳಿಸಿದರು. ವಿಜ್ಞಾನ ಕ್ಲಬ್ ನ ಕನ್ವೀನರ್ ಅಧ್ಯಾಪಕರಾದ ಜಯಪ್ರಸಾದ್ ಚಾಂದ್ರಾ ದಿನಕ್ಕೆ ಸಂಬಂಧಿಸಿದ
ವೀಡಿಯೋ, ಸ್ಲೈಡ್ ಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದರು.ಬಳಿಕ ಅಧ್ಯಾಪಿಕೆ ಡೆಫ್ನಿ ಸ್ಮಿತಾ ಡಯಾಸ್
ಚಾಂದ್ರಾ ದಿನಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಸ್ಪರ್ದೆಯಲ್ಲಿ ಸ್ಕಂದ ಪ್ರಸಾದ್.ಎ ಪ್ರಥಮ ಸ್ಥಾನ
ಹಾಗೂ ಶ್ರೇಯಸ್ ದ್ವಿತೀಯ ಸ್ಥಾನ ಪಡೆದುಕೊಂಡರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
ಬಿ ಪಿ ಪಿ ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ 2019 20 ಸಾಲಿನ ಮಂತ್ರಿಮಂಡಲ ಚುನಾವಣೆಯು
ಪ್ರಜಾಪ್ರಭುತ್ವ ಮಾದರಿಯಲ್ಲಿ ಜರಗಿತು.ಮುಖ್ಯ ಚುನಾವಣಾ ಅಧಿಕಾರಿಗಳಾದ ಶಾಲಾ
ಮಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ಅವರಿಗೆ ಅಭ್ಯರ್ಥಿಗಳು ನಾಮಪತ್ರ
ಸಲ್ಲಿಸಿದರು.ಅಭ್ಯರ್ಥಿಗಳಿಗೆ ಮತಚಿಹ್ನೆಗಳನ್ನುನೀಡಲಾಯಿತು.ಒಟ್ಟು ಹನ್ನೊಂದು ಮಂದಿ
ಸ್ಪರ್ಧಾರ್ಥಿಗಳಿದ್ದರು. ಬಳಿಕಮತ ಪ್ರಚಾರ ಕಾರ್ಯಗಳುಆರಂಭಗೊಂಡಿತು.ಲಭಿಸಿದ ಮತಚಿಹ್ನೆಯನ್ನು
ಹಿಡಿದುಕೊಂಡು ಮತಯಾಚಿಸಿದರು.ಮತದಾನದ ದಿನದಂದು ಸರದಿ ಸಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ
ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡಿದರು. ಪೋಲಿಂಗ್ ಆಫೀಸರ್ ಗಳಾಗಿ ಶಾಲಾ ಶಿಕ್ಷಕ ವೃಂದ
ಸಹಕರಿಸಿದರು. ಶಾಂತಿ ಪಾಲನೆಗಾಗಿ ಶಾಲಾ ಕಬ್ ಸ್ಕೌಟ್ ವಿಭಾಗದವರು
ಇದ್ದರು.ಮತದಾನದ ಬಳಿಕ ಮುಖ್ಯ ಚುನಾವಣಾ ಅಧಿಕಾರಿಗಳಾದ ಶಾಲಾ ಮಖ್ಯೋಪಾಧ್ಯಾಯರ
ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಬಳಿಕ ಅವರು ವಿಜೇತರನ್ನು ಅಧಿಕೃತವಾಗಿ
ಘೋಷಿಸಿದರು. ಅತ್ಯಧಿಕ ಮತಗಳನ್ನು ಗಳಿಸಿದ ಸ್ಕಂದ ಪ್ರಸಾದ್ ಎ ಶಾಲಾ ನಾಯಕ ಹಾಗೂ
ಬಿ.ಜೆ ದಕ್ಷ ಶೆಟ್ಟಿ ಉಪನಾಯಕನಾಗಿ ಆಯ್ಕೆಯಾದರು.ಅಯನ.ಕೆ ಆರೋಗ್ಯ
ಮತ್ತು ಶುಚಿತ್ವ ಮಂತ್ರಿ,ಕದೀಜ ಫಸಿಯಾ ಕ್ರೀಡಾ ಮಂತ್ರಿ, ಶ್ರೀಜ. ಎಸ್.ಎ
ಸಾಂಸ್ಕೃತಿಕ ಮಂತ್ರಿಯಾಗಿಯೂ ಆಯ್ಕೆಯಾದರು. ವಿಜೇತರ ವಿಜಯ
ಯಾತ್ರೆ ನಡೆಯಿತು.ಶಾಲಾ ಮಖ್ಯೋಪಾಧ್ಯಾಯರು ಸ್ಪೀಕರ್ ಆಗಿ
ಆಯ್ಕೆಯಾದ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ
ಮೊದಲ ಮಂತ್ರಿಮಂಡಲ ಸಭೆ ಕರೆಯಲಾಯಿತು. ರಕ್ಷಕ ಶಿಕ್ಷಕ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಕೇರಳ ಸರಕಾರವು ಒದಗಿಸಿದ 2019 - 20 ಶೈಕ್ಷಣಿಕ ವರ್ಷದ ಉಚಿತ
ಶಾಲಾ ಸಮ ಸಮವಸ್ತ್ರವಿತರಣೆಯನ್ನು ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ
ಎಂ.ಕೆ ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ, ಪೆರ್ಮುದೆ ಜುಮಾ
ಮಸೀದಿಯ ಕಾರ್ಯದರ್ಶಿಯಾದ ಅಹಮ್ಮದ್ ಅಲಿ ಮಾಣಿ , ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ
ಕುಡಾಲುಗುತ್ತು , ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ
ಮೊಹಮ್ಮದಾಲಿ, ಎಸ್.ಎಸ್.ಜಿ ಸದಸ್ಯರಾದ ಖಾದರ್ ಮಾಸ್ಟರ್ ಪೆರ್ಮುದೆ ಉಪಸ್ಥಿತರಿದ್ದರು.
ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಗೆ ಮಂಜೇಶ್ವರ ಶಾಸಕರಾಗಿದ್ದ ದಿವಂಗತ ಶ್ರೀ ಪಿ.ಬಿ ಅಬ್ದುಲ್ ರಝಾಕ್ ಅವರ
ಶಾಲಾಭಿವೃದ್ಧಿ ನಿಧಿಯಿಂದ ಲಭಿಸಿದ ಮೂರು ಲ್ಯಾಪ್ ಟೋಪ್ ಗಳನ್ನು ಪೈವಳಿಕೆ ಗ್ರಾಮ ಪಂಚಾಯತು
ಕ್ಷೇಮಾಭಿವೃದ್ಧಿಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಸದಾಶಿವ ಕೆ.ಕೆ, ಪೆರ್ಮುದೆ ಜುಮಾ ಮಸೀದಿಯ ಕಾರ್ಯದರ್ಶಿಯಾದ ಅಹಮ್ಮದ್ ಅಲಿ ಮಾಣಿ , ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲುಗುತ್ತು , ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಸ್.ಎಸ್.ಜಿ ಸದಸ್ಯರಾದ
ಖಾದರ್ ಮಾಸ್ಟರ್ ಪೆರ್ಮುದೆ ಉಪಸ್ಥಿತರಿದ್ದರು.
ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಹಾಗೂ ವಿವಿಧ ಕ್ಲಬ್ ಗಳ ಉದ್ಘಾಟನೆ
ಪೆರ್ಮುದೆ : ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ
ಶಾಲೆಯಲ್ಲಿ 2019 -
20 ನೇಶೈಕ್ಷಣಿಕ
ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯು ಜರಗಿತು. ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ
ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಸದಾಶಿವಕೆ.ಕೆ, ಪೆರ್ಮುದೆ ಜುಮಾ ಮಸೀದಿಯ ಕಾರ್ಯದರ್ಶಿಯಾದ
ಅಹಮ್ಮದ್ ಅಲಿ ಮಾಣಿ , ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲುಗುತ್ತು , ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಸ್.ಎಸ್.ಜಿ
ಸದಸ್ಯರಾದ ಖಾದರ್ ಮಾಸ್ಟರ್ ಪೆರ್ಮುದೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಎಂ.ಕೆ ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದಶ್ರೀ ಸದಾಶಿವ
ಕೆ.ಕೆ ಗತ ಶೈಕ್ಷಣಿಕ ವರ್ಷದ ಲೆಕ್ಕ ಪತ್ರ
ಮಂಡಿಸಿದರು. ಈ ಶೈಕ್ಷಣಿಕ ವರ್ಷದ ಶೈಕ್ಷಣಿಕ ವಿಚಾರಗಳನ್ನು ಸವಿವರವಾಗಿ ತಿಳಿಸಿದರು. ಬಳಿಕ 2019 - 20ನೇ ಶೈಕ್ಷಣಿಕ ವರ್ಷದ ನೂತನ ರಕ್ಷಕ ಶಿಕ್ಷಕ ಸಂಘದ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಮೊಹಮ್ಮದಾಲಿ, ಉಪಾಧ್ಯಕ್ಷರಾಗಿ ಶ್ರೀಮತಿ ವೆರೋನಿಕ ಡಿ ಸೋಜ, ಮಾತೃ ಪಿ ಟಿ.ಎ ಸಂಘದ ಅಧ್ಯಕ್ಷೆಯಾಗಿ
ಶ್ರೀಮತಿ ಪುಷ್ಪಲತಾ, ಉಪಾಧ್ಯಕ್ಷೆಯಾಗಿ ಶ್ರೀಮತಿ ಭಕ್ತಿ ಹಾಗೂ ಇಪ್ಪತ್ತು
ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ಸತೀಶ್ ರೈ ಕುಡಾಲುಗುತ್ತು ಹಾಗೂ ಹತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಬಳಿಕ ವಿವಿಧ
ಕ್ಲಬ್ ಗಳ
ಉದ್ಘಾಟನೆಯು
ಜರಗಿತು.ವಿವಿಧ ಕ್ಲಬ್ ಚಟುವಟಿಕೆಗಳ ಕುರಿತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ತಿಳಿಸಿದರು.ಶಾಲಾ ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು.
ಪೆರ್ಮುದೆ : ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಾಗೂ ಪೈವಳಿಕೆ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಜೃಂಭಣೆಯಿಂದ ಜರಗಿತು.ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಎ.ಕೆ.ಎಂ ಅಶ್ರಫ್ ,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ , ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ, ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ. ಅಮೀರ್, ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಒ ಶ್ರೀ ವಿಜಯ ಕುಮಾರ್ , ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ , ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ , ಹಾಗೂ ಮಕ್ಕಳು,ರಕ್ಷಕರು, ಊರವರು ಸೇರಿ ವರ್ಣರಂಜಿತ ಮೆರವಣಿಗೆಯೊಂದಿಗೆ ಶಾಲಾ ಪ್ರವೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಗೊಂಬೆ ಮುಖವಾಡ ಧರಿಸಿದ ಮಕ್ಕಳು, ವರ್ಣರಂಜಿತ ಕೊಡೆಗಳನ್ನು ಹಿಡಿದ ರಕ್ಷಕರು ನೋಡುಗರ ಗಮನ ಸೆಳೆದರು.ಮೆರವಣಿೆಗೆಯ ಬಳಿಕ ಎಲ್ಲರಿಗೂ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ ಅವರ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಿಕೊಟ್ಟರು.ತದನಂತರ ಸಭಾಕಾರ್ಯಕ್ರಮವು ಆರಂಭಗೊಂಡಿತು.ಶಾಲಾ ನೃತ್ಯ ಗುಂಪು ಹೆಜ್ಜೆ ಗೆಜ್ಜೆ ಬಳಗದವರಿಂದ ಪ್ರಾರ್ಥನಾ ನೃತ್ಯದೊಂದಿಗೆ ಸಭಾ ಕಾರ್ಯಕ್ರಮಕ್ಕೆ ಶುಭಾರಂಭ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ , ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಎ.ಕೆ.ಎಂ ಅಶ್ರಫ್ , ಮಂಜೇಶ್ವರ ಉಪಜಿಲ್ಲಾ ವಿಧ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ , ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ. ಅಮೀರ್, ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಒ ಶ್ರೀ ವಿಜಯ ಕುಮಾರ್ , ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ , ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಭಟ್.ಕೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲು ಗುತ್ತು , ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ರಮಣಿ ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ಪ್ರವೇಶೋತ್ಸವದ ಕುರಿತು ಪ್ರಾಸ್ತಾವಿಕ
ನುಡಿಗಳನ್ನು ಆಡಿದರು.ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಎ.ಕೆ.ಎಂ ಅಶ್ರಫ್ ದೀಪ ಬೆಳಗಿಸಿ
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಅವರು ಉದ್ಘಾಟನಾ ಭಾಷಣ ಮಾಡುತ್ತಾ ಮಕ್ಕಳಲ್ಲಿ
ಉತ್ತಮ ಮೌಲ್ಯ,ಮನೋಭಾವಗಳನ್ನು, ಲಕ್ಷ್ಯ ಗುರಿ ತಲುಪಿಸುವುದರಲ್ಲಿ ಶಾಲೆಯ ಪಾತ್ರ ಅತಿದೊಡ್ಡದು
ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಒ ಶ್ರೀ ವಿಜಯ
ಕುಮಾರ್ ಅವರು ಕಾರ್ಯಕ್ರಮಕ್ಕೆ ಶುಭಹಾರೈಸುತ್ತಾ ರಕ್ಷಕರು ಮಕ್ಕಳಿಗಾಗಿ ಸ್ವಲ್ಪ ಸಮಯ
ಮೀಸಲಿಡಬೇಕು ಎಂದು ತಿಳಿಸಿದರು. ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಾಲಾ
ವಿದ್ಯಾರ್ಥಿಗಳಾದ ಚೇತನ್ ಎಡಕ್ಕಾನ ಹಾಗೂ ನೂತನ್ ಎಡಕ್ಕಾನ ಅವರನ್ನು ಸ್ಮರಣಿಕೆ ನೀಡಿ
ಗೌರವಿಸಲಾಯಿತು. ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ
ಎಂ.ಕೆ. ಅಮೀರ್,ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ ಭಟ್.ಇ, ಶಾಲಾ ನಿವೃತ್ತ
ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ, ಪಿ.ಟಿ.ಎ ಅಧ್ಯಕ್ಷ ರಾದ ಶ್ರೀ ಸತೀಶ್ ರೈ ಕುಡಾಲು
ಗುತ್ತು , ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಯಾದ ಶ್ರೀಮತಿ ರಮಣಿ ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ
ಮೊಹಮ್ಮದಾಲಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಶಾಲೆಗೆ ಹೊಸದಾಗಿ ಆಗಮಿಸಿದ ನವಾಗತರಿಗೆ
ಕಲಿಕೋಪಕರಣಗಳ ಕಿಟ್ ವಿತರಿಸಲಾಯಿತು.
ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಜೆ ಶೆಟ್ಟಿ ಅಧ್ಯಕ್ಷೀಯ ಭಾಷಣ
ಮಾಡಿದರು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಾಲೆಗಳ ಪಾತ್ರ ಬಹು ದೊಡ್ಡದು ಎಂದು
ತಿಳಿಸಿದರು. ಬಳಿಕ ಶಾಲಾ ನೃತ್ಯ ಗುಂಪು ಹೆಜ್ಜೆ ಗೆಜ್ಜೆ ಬಳಗದವರಿಂದ ಶಾಲಾ ಪ್ರವೇಶೋತ್ಸವ ಗಾನದ
ನೃತ್ಯಾವಿಷ್ಕಾರ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಸ್ವಾಗತಿಸಿ,ಸಿ.ಆರ್.ಸಿ
ಸಂಯೋಜಕೆಯಾದ ಶ್ರೀಮತಿ ಶಶಿಪ್ರಭ ವಂದಿಸಿದರು.ಶಾಲಾ ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್
ಕಾರ್ಯಕ್ರಮ ನಿರೂಪಿಸಿದರು.
Subscribe to:
Posts (Atom)