ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಹಾಗೂ ವಿವಿಧ ಕ್ಲಬ್ ಗಳ ಉದ್ಘಾಟನೆ
ಪೆರ್ಮುದೆ : ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ
ಶಾಲೆಯಲ್ಲಿ 2019 -
20 ನೇಶೈಕ್ಷಣಿಕ
ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯು ಜರಗಿತು. ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ
ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಕೆ ಅಮೀರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಸದಾಶಿವಕೆ.ಕೆ, ಪೆರ್ಮುದೆ ಜುಮಾ ಮಸೀದಿಯ ಕಾರ್ಯದರ್ಶಿಯಾದ
ಅಹಮ್ಮದ್ ಅಲಿ ಮಾಣಿ , ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕುಡಾಲುಗುತ್ತು , ಎಂ.ಪಿ.ಟಿಎ ಅಧ್ಯಕ್ಷೆ ಶ್ರೀಮತಿ ರಮಣಿ , ಪ್ರೀ ಪ್ರೈಮರಿ ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಎಸ್.ಎಸ್.ಜಿ
ಸದಸ್ಯರಾದ ಖಾದರ್ ಮಾಸ್ಟರ್ ಪೆರ್ಮುದೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಎಂ.ಕೆ ಅಮೀರ್ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದಶ್ರೀ ಸದಾಶಿವ
ಕೆ.ಕೆ ಗತ ಶೈಕ್ಷಣಿಕ ವರ್ಷದ ಲೆಕ್ಕ ಪತ್ರ
ಮಂಡಿಸಿದರು. ಈ ಶೈಕ್ಷಣಿಕ ವರ್ಷದ ಶೈಕ್ಷಣಿಕ ವಿಚಾರಗಳನ್ನು ಸವಿವರವಾಗಿ ತಿಳಿಸಿದರು. ಬಳಿಕ 2019 - 20ನೇ ಶೈಕ್ಷಣಿಕ ವರ್ಷದ ನೂತನ ರಕ್ಷಕ ಶಿಕ್ಷಕ ಸಂಘದ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಮೊಹಮ್ಮದಾಲಿ, ಉಪಾಧ್ಯಕ್ಷರಾಗಿ ಶ್ರೀಮತಿ ವೆರೋನಿಕ ಡಿ ಸೋಜ, ಮಾತೃ ಪಿ ಟಿ.ಎ ಸಂಘದ ಅಧ್ಯಕ್ಷೆಯಾಗಿ
ಶ್ರೀಮತಿ ಪುಷ್ಪಲತಾ, ಉಪಾಧ್ಯಕ್ಷೆಯಾಗಿ ಶ್ರೀಮತಿ ಭಕ್ತಿ ಹಾಗೂ ಇಪ್ಪತ್ತು
ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ಸತೀಶ್ ರೈ ಕುಡಾಲುಗುತ್ತು ಹಾಗೂ ಹತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಬಳಿಕ ವಿವಿಧ
ಕ್ಲಬ್ ಗಳ
ಉದ್ಘಾಟನೆಯು
ಜರಗಿತು.ವಿವಿಧ ಕ್ಲಬ್ ಚಟುವಟಿಕೆಗಳ ಕುರಿತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ತಿಳಿಸಿದರು.ಶಾಲಾ ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಜಯಪ್ರಸಾದ್ ವಂದಿಸಿದರು.
No comments:
Post a Comment